ಸುಳ್ಯ ನೆಹರು ಮೆಮೋರಿಯಲ್ ಕಾಲೇಜು ಸಮಾಜ ಕಾರ್ಯ ವಿಭಾಗದ ವತಿಯಿಂದ ಏರ್ಪಡಿಸಿದ್ದ ಸ್ವಾವಲಂಬನೆಡೆಗೆ ಒಂದು ಹೆಜ್ಜೆ ಎಂಬ ಕೌಶಲ್ಯ ತರಬೇತಿ ಶಿಬಿರದ ಒಂದು ಭಾಗವಾದ ನರ್ಸರಿ ನಿರ್ವಹಣೆ ಮತ್ತು ಕಸಿ ಕಟ್ಟುವಿಕೆ ವಿಭಾಗದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳ ತರಬೇತಿಯಿಂದ ಉತ್ತೇಜಿತರಾಗಿ ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ಸಲಹೆಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಹಾಗೂ ನೆಹರು ಮೆಮೋರಿಯಲ್ ಕಾಲೇಜು ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳಾದ ಕೃಪಾ ಎ ಎನ್. ಶೋಭಾ ಎ.ಹಾಗೂ ಸಮಾಜಶಾಸ್ತ್ರವಿಭಾಗದ ಚಿತ್ರಲೇಖ ಕೆ. ಯಸ್. ಇವರುಗಳು ಸುಳ್ಯದ ಓಡಬಾಯಿ ಯಲ್ಲಿರುವ ಕಸ್ತೂರಿ ನರ್ಸರಿಗೆ ಅಧ್ಯಯನ ಭೇಟಿಯನ್ನು ನೀಡಿದರು.
ಕಸ್ತೂರಿ ನರ್ಸರಿ ಮಾಲಕರಾದ ಮಧುಸೂಧನ್ ಹಾಗೂ ಲತಾ ಮಧುಸೂದನ್ ಅವರು ನರ್ಸರಿ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರಲ್ಲದೆ, ಶಿಬಿರಾರ್ಥಿಗಳಿಗೂ, ತಾವು ಕೂಡ ನರ್ಸರಿ ಕೃಷಿಯನ್ನು ಮಾಡುವುದರ ಮುಖಾಂತರ ಸ್ವಾವಲಂಬನೆಡೆಗೆ ಕಾರ್ಯಪ್ರವೃತ್ತರಾಗಬೇಕೆಂದು ಉತ್ತೇಜಿಸಿದರು.