Ad Widget

ಅರಂತೋಡು : ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ

ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ, ಸಮಾಜ ಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಅರಂತೋಡು ಹಾಗೂ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಜಂಟಿ ಆಶ್ರಯದಲ್ಲಿ “ಸ್ವಾವಲಂಬನೆಡೆಗೆ ಒಂದು ಹೆಜ್ಜೆ”ಎಂಬ ಶೀರ್ಷಿಕೆಯಡಿ ಯಲ್ಲಿ ನಾಲ್ಕು ದಿನದ ಕೌಶಲ್ಯ ತರಬೇತಿ ಶಿಬಿರವು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡಿನಲ್ಲಿ ನಡೆಯಿತು.

. . . . . .

ಈ ಶಿಬಿರದ ಕೊನೆಯ ದಿನ ದಲ್ಲಿ ಸಮರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಸುರೇಶ್ ಯು ಕೆ ಅಧ್ಯಕ್ಷರು ,ಎಸ್ .ಡಿ.ಎಂ. ಸಿ
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅರಂತೋಡು ವಹಿಸಿದ್ದರು. ಸಮಾರೋಪ ಸಮಾರಂಭದ ಭಾಷಣಕಾರರಾಗಿ ಗೋಪಾಲಕೃಷ್ಣ ಬಿ ಕೆ ಮುಖ್ಯೋಪಾಧ್ಯಾಯರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅರಂತೋಡು ಎಲ್ಲ ಶಿಬಿರಾರ್ಥಿಗಳಿಗೆ ಶಿಬಿರದ ಮಹತ್ವ ಮತ್ತು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾವಲಂಬನೆಡೆಗೆ ಒಂದು ಹೆಜ್ಜೆಯನ್ನು ಇಡಬೇಕು ಎಂದು ಕಿವಿ ಮಾತನ್ನು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಯುತ ರಮೇಶ್ ಪ್ರಾಂಶುಪಾಲರು, ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು, ಶ್ರೀಮತಿ ಮಧುರ ಎಂ .ಆರ್ ನಿರ್ದೇಶಕರು, ಸುಳ್ಯ ಕೃಷಿ ಉತ್ಪಾದಕ ಕಂಪೆನಿ (ನಿ.) ಹಾಗೂ ಶ್ರೀ ಮತಿ ಕೃಪಾ ಎ ಎನ್ ಮುಖ್ಯಸ್ಥರು, ಸಮಾಜಕಾರ್ಯ ವಿಭಾಗ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಶೋಭಾ ಎ ಸ್ವಾಗತಿಸಿ, ಕೃಪ ಎ.ಎನ್. ವಂದಿಸಿದರು . ಬೇಬಿ ವಿದ್ಯಾ ಉಪನ್ಯಾಸಕರು ಎನ್ ಎಂ ಪಿ ಯು ಸಿ ಸುಳ್ಯ ಹಾಗೂ
ನಿಶಾಂತ್ ಎ ಡಿ ತೃತೀಯ ಬಿ ಎಸ್ ಡಬ್ಲ್ಯೂ ಕಾರ್ಯಕ್ರಮವನ್ನು ನಿರೂಪಿಸಿದರು. ನೆಹರು ಮೆಮೊರಿಯಲ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಚಿತ್ರಲೇಖ ಕೆ ಎಸ್ ಶಿಬಿರದುದ್ದಕ್ಕೂ ಮೇಲ್ವಿಚಾರಕರಾಗಿ ಸಹಕರಿಸಿದರು.
ಈ ಕೌಶಲ್ಯ ತರಬೇತಿಯಲ್ಲಿ ಒಟ್ಟು120 ಶಿಬಿರಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಶಿಬಿರದ ಯಶಸ್ವಿಗೆ ಊರವರು ಹಾಗೂ ಹಲವು ಸಂಘ ಸಂಸ್ಥೆಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಅರಂತೋಡು, ಯು ಬಿ ಚಕ್ರಪಾಣಿ ನವಮಿ ಸ್ಟೋರ್, ಅಧ್ಯಕ್ಷರು, ವತ೯ಕರ ಸಂಘ ಕಲ್ಲುಗುಂಡಿ, ಪ್ರಹ್ಲಾದ್ ಕೆ ಸಿ ಮ್ಹಾಲಕರು, ಶ್ರೀ ಮಲ್ಲಿಕಾರ್ಜುನ ಪ್ಯೂಯೆಲ್ ಅರಂತೋಡು, ದಿನೇಶ್ ಕುಮಾರ್ ಪಿಂಗಾರತೋಟ, ಹಿರಿಯ ಕಛೇರಿ ಅಧ್ಯಕ್ಷರು, ಕೆ ವಿ ಜಿ ಮೆಡಿಕಲ್ ಕಾಲೇಜು, ಸುಳ್ಯ, ಅನಂತ್ ರಾಜ್ ಎ. ಬಿ ( HR Recruiter sahana Group Katriguppe Banashankari Bangalore) , ಶೌರ್ಯ ವಿಪತ್ತು ನಿರ್ವಹಣಾ ಘಟಕ, ಸಂಪಾಜೆ ವಲಯ, ಚರಣ್ ರಾಜ್ ಎ ಯು ಅಡ್ಕಬಳೆ ಕಸ್ಟ್ರಕ್ಷನ್,ಅರಂತೋಡು, ಸ್ಪಂದನ ಗೆ ಳೆಯರ ಬಳಗ (ರಿ.) ಅಡ್ತಲೆ ಹಾಗೂ ಎಲ್ಲಾ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಸಹಕರಿಸಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!