Ad Widget

ಐವರ್ನಾಡು : ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಆರಂಭ- ಪೂರ್ವಭಾವಿ ಸಭೆ – ಅಂಬೇಡ್ಕರ್ ಜಯಂತಿ ಆಚರಣೆ

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಭಾವಿ ಸಭೆ ಮತ್ತು ಡಾ ಬಿ.ಆರ್. ಆಂಬೇಡ್ಕರ್ ಜಯಂತಿ ಆಚರಣೆ ಏ.14ರಂದು ಐವರ್ನಾಡಿನಲ್ಲಿ ನಡೆಯಿತು
ಸಭೆಯಲ್ಲಿ ಸುಳ್ಯ ಕ್ಷೇತ್ರ ಚುನಾವಣಾ ಸಂಚಾಲಕ ಎ.ವಿ ತೀರ್ಥರಾಮ ಅವರು ಭಾಗವಹಿಸಿ ಮಾತನಾಡಿ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕುಮಾರಿ ಭಾಗೀರಥಿ ಮುರುಳ್ಯರನ್ನು ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲು ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಪಣತೊಡೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕುಮಾರಿ ಭಾಗೀರಥಿ ಮುರುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಭಾಜಪ ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್ , ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಗಳಾದ ಪೂವಾಜೆ ಕುಶಾಲಪ್ಪ ಗೌಡ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೆನಾಲ,ಚುನಾವಣಾ ಪ್ರವಾಸ ಪ್ರಮುಖ್ ಎಸ್ ಎನ್ ಮನ್ಮಥ , ಮಾಧ್ಯಮ ವಕ್ತಾರ ವೆಂಕಟ್ ದಂಬೆಕೋಡಿ , ಆಭ್ಯರ್ಥಿ ಪ್ರಮುಖ್ ವಿನಯ್ ಮುಳುಗಾಡು, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಜಯರಾಜ್ ಕುಕ್ಕೆಟ್ಟಿ, ಜಿಲ್ಲಾ ರೈತಮೊರ್ಚಾ ಉಪಾಧ್ಯಕ್ಷ ಮಹೇಶ್ ರೈ ಮೇನಾಲ, ಮಂಡಲ ಯುವಮೊರ್ಚಾ ಕಾರ್ಯದರ್ಶಿ ಸುನಿಲ್ ಕೇರ್ಪಳ, ಚುನಾವಣಾ ಸಾಮಾಜಿಕ ಜಾಲಾತಾಣ ಮತ್ತು ಹೈಟೆಕ್ ಪ್ರಚಾರ ಸಂಚಾಲಕ ಪ್ರಸಾದ್ ಕಾಟೂರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ ಹಾಗೂ ಪಂಚಾಯತ್ ಸದಸ್ಯರು, ಪಕ್ಷದ ಹಿರಿಯರು, ಪ್ರಮುಖರು,ಮಹಿಳಾ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading