ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ಕಾವೂರು ಶ್ರೀ ಮಹಾವಿಷ್ಣು ದೇವರ ಜಾತ್ರೋತ್ಸವವು ಆರಂಭಗೊಂಡಿದ್ದು, ನಿನ್ನೆ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.
ಎ.6ರಂದು ಶಿರಾಡಿ ಯಾನೆ ರಾಜಂ ದೈವದ ಭಂಡಾರ ಬಂದು ಉಗ್ರಾಣ ತುಂಬಿಸಿ ನಂತರ ಧ್ವಜಾರೋಹಣ ನಡೆಯಿತು. ಎ. 8ರಂದು ತೋಟಚಾವಡಿಯಲ್ಲಿ ದೇವರಿಗೆ ಬಲ್ಲಾಳರ ಕಾಣಿಕೆಯಾಗಿ, ಉಳ್ಳಾಕುಳ ದರ್ಶನ ನಡೆಯಿತು. ಅದೇ ದಿನ ರಾತ್ರಿ ಕಾವೂರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನಾ ಸೇವೆ ಬಳಿಕ ಉತ್ಸವ ಬಲಿ ಪ್ರಾರಂಭವಾಯಿತು. ಬಳಿಕ ಶ್ರೀ ದೇವರಿಗೆ ರಂಗಪೂಜೆ ನಂತರ ಅನ್ನ ಸಂತರ್ಪಣೆ ನಡೆಯಿತು.
ಎ.9ರಂದು ಪೂರ್ವಾಹ್ನ ಸಣ್ಣ ದರ್ಶನ ಬಲಿ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಕೊರತ್ತೋಡಿ ನೆಲ್ಲೂರು ಕೆಮ್ರಾಜೆ ಇವರಿಂದ ಭಜನಾ ಸೇವೆ, ಬಳಿಕ ನೃತ್ಯ ಬಲಿ ನಡೆಯಿತು.
ಎ.10 ಪೂರ್ವಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಮಧ್ಯಾಹ್ನ ಪಯ್ಯೋಳಿ ಹೊರಡುವುದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಿನುಂಗೂರು ಇವರಿಂದ ಭಜನಾ ಸೇವೆ, ಬಳಿಕ ರಂಗಪೂಜೆ, ಕಟ್ಟೆಪೂಜೆ ನಡೆಯಿತು.
ಇಂದು ರಾತ್ರಿ ತೋಟಚಾವಡಿಯಿಂದ ಉಳ್ಳಾಕುಳ ಮತ್ತು ಮಿತ್ತೂರು ನಾಯರ್ ಭಂಡಾರ ಬರುವುದು, ವಾಲಸಿರಿ ಉತ್ಸವ, ಕಟ್ಟೆಪೂಜೆ ಬಳಿಕ ದೇವಳಕ್ಕೆ ಬಂದು ದೇವರಿಗೆ ಶಯನ ನಡೆಯಲಿದೆ.