Ad Widget

ಜನರೊಂದಿಗೆ ನೇರ ಸಂವಾದದಲ್ಲಿ ಸುಳ್ಯ ಎಎಪಿ ಅಭ್ಯರ್ಥಿ

. . . . . .

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಇದೀಗ ಜನರೊಂದಿಗೆ ನೇರ ಸಂವಾದದಲ್ಲಿ ತೊಡಗಿದ್ದಾರೆ. ಪ್ರಚಾರ ಕಾರ್ಯ ಹಾಗೂ ಜನರೊಂದಿಗೆ ಸಂವಾದ ನಡೆಸುತ್ತಿರುವ ಎಎಪಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್‌ ಅವರು ಈಗಾಗಲೇ ಸುಳ್ಯದ ವಿವಿದೆಡೆ ಒಂದು ಸುತ್ತಿನ ಪ್ರವಾಸ ನಡೆಸಿದ್ದರು. ಇದೀಗ ಜನರ ಮೂಲಭೂತ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಮುಂದೆ ಹಾಕಿಕೊಳ್ಳಬಹುದಾದ ಯೋಜನೆಗಳ ಬಗ್ಗೆ ಜನರೊಂದಿಗೆ ಚರ್ಚಿಸುತ್ತಿದ್ದಾರೆ.
ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ , ಜಿಲ್ಲಾ ಮುಖಂಡ‌ ವೇಣುಗೋಪಾಲ ಪುಚ್ಚಪ್ಪಾಡಿ , ಎಎಪಿ ಜಿಲ್ಲಾಧ್ಯಕ್ಷ ಅಶೋಕ ಎಡಮಲೆ ಅವರು ಚುನಾವಣಾ ಪ್ರಣಾಳಿಕೆ ತಯಾರಿಕೆಗೆ ಜನರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಸ್ಥಳೀಯ ಪ್ರಣಾಳಿಕೆ ತಯಾರಿಗೆ ಸೂಚಿಸಿದರು.
ಪ್ರಚಾರ ಕಾರ್ಯದಲ್ಲಿ ಆಮ್‌ ಆದ್ಮಿ ಪಕ್ಷದ ಮುಖಂಡರಾದ ರಾಮಕೃಷ್ಣ ಬೀರಮಂಗಲ, ಖಲಂದರ್‌ ಎಲಿಮಲೆ, ಸಂಶುದ್ದಿನ್‌, ಗುರುಪ್ರಸಾದ್‌ ಮೇರ್ಕಜೆ, ಕಲಂದರ್‌ ಶಾ ,ಗಣೇಶ್ ಪ್ರಸಾದ್ ಕಂದಡ್ಕ, ಶಿಲ್ಪಾ ಮೊದಲಾದವರು ಇದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!