ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದು , ಇಂದು ರಾಜ್ಯದಲ್ಲಿ ನೊಂದವರ ದ್ವನಿಯಾಗಿ ಕೆಲಸ ಮಾಡುತ್ತಿದ್ದು, ಆರಂಭದಲ್ಲಿ 15 ಮಂದಿ ಇದ್ದ ಪಕ್ಷದ ಕಾರ್ಯಕರ್ತರು, ಇಂದು 45000 ವಾಗಿದೆ ಈ ನಿಟ್ಟಿನಲ್ಲಿ ಸುಳ್ಯದಲ್ಲೂ ಪಕ್ಷ ತನ್ನ ಕಾರ್ಯ ಚಟುವಟಿಕೆ ಆರಂಭಿಸು ನಿಟ್ಟಿನಲ್ಲಿ ಘಟಕ ರಚಿಸಿದ್ದು, ಘಟಕದ ಅಧ್ಯಕ್ಷರಾಗಿ ಅವಿನಾಶ್ ಕಾರಿಂಜ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜೀವನ್ ನಾರ್ಕೋಡು ಕಾರ್ಯದರ್ಶಿ ಯಾಗಿ ಇಕ್ಬಾಲ್ ಸುಣ್ಣಮೂಲೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯದರ್ಶಿ ಸೋಮಸುಂದರ ಕೆ ಎಸ್ ತಿಳಿಸಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ,ಸ್ವಚ್ಚ ಆಡಳಿತ : ಪ್ರಮಾಣಿಕ ನಿಲುವು ನಮ್ಮಪಕ್ಷದ ಅಜೆಂಡವಾಗಿದ್ದು.ರಾಜ್ಯದಲ್ಲಿ ರವಿಕೃಷ್ಣಾ ರೆಡ್ಡಿ ಮುಂದಾಳುತ್ವದಲ್ಲಿ ಪಕ್ಷ ಸಂಘಟಿತವಾಗಿದ್ದು, ನಾಡಿನ ಸುರಕ್ಷತೆಗೆ, ರಾಜ್ಯದಲ್ಲಿ ನಡೆಯುತ್ತಿರುವ ಬ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ 224 ಕ್ಷೇತ್ರದಲ್ಲಿಯೂ ಸ್ಪರ್ದಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೆ 119 ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರೀಯೆ ಮುಗಿದಿದ್ದು,ಮಿಕ್ಕುಳಿದಿರುವ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳ ಅನ್ವೇಷಣೆಯಲ್ಲಿದ್ದೇವೆ , ಈಗಾಗಲೇ 300 ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೂ ಆಯ್ಕೆ ಅವರ ಅರ್ಹತೆಯ ಅಳೆದು ತೂಗಿ ನೀಡಲಾಗುತ್ತಿದೆ.ಸುಳ್ಯದಲ್ಲಿಯೂ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದೇವೆ, ಪ್ರಾಮಾಣಿಕ ಅಭ್ಯರ್ಥಿಯನ್ನು ಹುಡುಕಬೇಕಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ, ಸುಳ್ಯ ಘಟಕದ ಅಧ್ಯಕ್ಷ ಅವಿನಾಶ್ ಕಾರಿಂಜ, ಪ್ರಧಾನ ಕಾರ್ಯದರ್ಶಿ ಜೀವನ್ ನಾರ್ಕೋಡು,ಐವನ್ ಬೆಳ್ಳಾರೆ ಮೊದಲಾದವರಿದ್ದರು.
- Friday
- November 1st, 2024