ಸುಬ್ರಹ್ಮಣ್ಯದ ಪ್ರಸಿದ್ಧ ಉಪನದಿ ದರ್ಪಣ ತೀರ್ಥ ನದಿಯಲ್ಲಿ ಸಾವಿರಾರು ಮೀನುಗಳು ಸತ್ತಿರುವ ಘಟನೆ ಎ.5 ರಂದು ವರದಿಯಾಗಿದೆ.
ಒಂದು ಕಡೆ ನೀರಿನ ಹರಿವಿನ ಪ್ರಮಾಣ ಕಡಮೆಯಾಗಿರುವುದು ಹಾಗೂ ನೀರಿಗೆ ಡ್ರೈನೇಜ್ ನೀರು ಸೇರುತ್ತಿರುವುದು ಕಂಡು ಬಂದಿದ್ದು ಇದರಿಂದ ಸಾವಿರಾರು ಜಲಚರಗಳು ಸತ್ತಿರುವುದು ಕಂಡು ಬಂದಿದೆ. ಮೀನುಗಳು ಸತ್ತು ತೆಲುತ್ತಿದೆ. ಇದರಿಂದಾಗಿ ಭಾರಿ ವಾಸನೆಯೂ ಬರುತ್ತಿದೆ. ನದಿಯ ಇಕ್ಕೆಲದ ಮನೆಯವರು ಮೂಗು ಮುಚ್ಚು ಪರಿಸ್ಥಿತಿ ಬಂದೊದಗಿದೆ.
ಒಂದು ಕಡೆ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದ್ದು ಸಾರ್ವಜನಿಕರು ದುರವ್ಯವಸ್ಥೆಯ ಬಗ್ಗೆ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಇದಲ್ಲದೆ ಇದೇ ನೀರು ಕುಮಾರಧಾರ ನದಿ ಸೇರಿ ಕುಮಾರಧಾರ ಸ್ನಾನ ಘಟ್ಟವು ಮಲೀನವಾಗಲು ಪ್ರಾರಂಭವಾಗಿದೆ.