ಪತ್ರಕರ್ತರಾದ ಗುರುವಪ್ಪ ಬಾಳೆಪುಣಿಯವರು ಕಳೆದ ವರ್ಷ ಉತ್ತರ ಪ್ರದೇಶದ ನೋಯ್ಡಾ ದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಫುಡ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ ಗುತ್ತಿಗಾರಿನ ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಿದ್ಧಿದಾತ್ರಿ ಸಂಜೀವಿನಿ ತಂಡವನ್ನು ಸಂದರ್ಶಿಸಲು ಬಂದ ಸಂಧರ್ಭದಲ್ಲಿ ಗುತ್ತಿಗಾರಿನಲ್ಲಿ 35 ವರ್ಷಗಳಿಂದ ಕಬ್ಬಿಣದ ಕೆಲಸ ಮಾಡುತ್ತಿರುವ ಲೀಲಾವತಿ ಪೈಕ ರವರ ಸಂದರ್ಶನ ಮಾಡಿ ಅವರ ಯಶೋಗಾಥೆಯನ್ನು ಹೊಸದಿಗಂತ ಪತ್ರಿಕೆಯಲ್ಲಿ ಬರೆದಿದ್ದರು. ಇದೀಗ ಗುರುವಪ್ಪ ಬಾಳೆಪುಣಿಯವರು ಬರೆದ ಲೀಲಾವತಿ ಪೈಕ ರವರ ಕುರಿತ ಈ ಯಶೋಗಾಥೆ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿಸಿದ “ಸಾಧಕ ಕುಶಲಕರ್ಮಿಗಳು” ಪುಸ್ತಕದಲ್ಲಿ ಪ್ರಕಟಗೊಂಡಿದೆ.
(ವರದಿ : ಉಲ್ಲಾಸ್ ಕಜ್ಜೋಡಿ)
- Thursday
- November 21st, 2024