ಸುಳ್ಯ ತಾಲೂಕಿನಲ್ಲಿ ಪ್ರಪ್ರಥಮ ಎಂಡೋ ಪಾಲನ ಕೇಂದ್ರ (ಎಂಡೋ ಡೇ ಕೇರ್ ಸೆಂಟರ್) ಆರಂಭಿಸಲು ಸರಕಾರ ಅನುದಾನ ಬಿಡುಗಡೆಗೊಳಿಸಿದೆ. ಬೆಳ್ಳಾರೆಯ ಹಳೆ ಆಸ್ಪತ್ರೆ ಕಟ್ಟಡವನ್ನು ದುರಸ್ತಿಗೊಳಿಸಿ ಕೇಂದ್ರ ತೆರೆಯಲು ಆರೋಗ್ಯ ಇಲಾಖೆ ಇಂಜಿನಿಯರ್ ವಿಭಾಗ ತೀರ್ಮಾನಿಸಿದ್ದು ಜೂನ್ 22ರಂದು ಬೆಳ್ಳಾರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ ಈ ಕೇಂದ್ರದಲ್ಲಿ ಎಂಡೋಸಲ್ಫಾನ್ ಪೀಡಿತರಿಗೆ ಫಿಸಿಯೋಥೆರಪಿ, ವ್ಯಾಯಾಮ, ಪೀಡಿತ ಮಕ್ಕಳಿಗೆ ಆಟವಾಡಲು ವ್ಯವಸ್ಥೆ, ಹಾಗೂ ಇನ್ನಿತರ ಚಿಕಿತ್ಸಾ ಸೌಲಭ್ಯಗಳನ್ನು ಒಳಗೊಂಡಿದೆ. ಸುಳ್ಯ ತಾಲೂಕಿನಲ್ಲಿ ಸುಮಾರು 100 ಕ್ಕಿಂತಲೂ ಹೆಚ್ಚು ಎಂಡೋಸಲ್ಫಾನ್ ಪೀಡಿತರಿದ್ದು ಅವರಿಗೆ ಈ ಕೇಂದ್ರ ನೆರವಾಗಲಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಮಣ್ಯ ತಿಳಿಸಿದ್ದಾರೆ.
- Friday
- November 1st, 2024