ಸುಳ್ಯದ ಕುರುಂಜಿಭಾಗ್ ಕೆ.ವಿ.ಜಿ ಕ್ಯಾಂಪಸ್ ನಲ್ಲಿ ರೂಪೇಶ್ ಪೂಜಾರಿಮನೆ ಯವರ ಮಾಲಕತ್ವದ ಆಧುನಿಕ ಶೈಲಿಯ ಕ್ಯಾಂಪಸ್ ಕೆಫೆ ಎ.3 ರಂದು ಶುಭಾರಂಭ ಗೊಂಡಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.ಕೆಫೆಯ ಉದ್ಘಾಟನೆ ನೆರವೇರಿಸಿದರು. ಹಿರಿಯರಾದ ಮಾಲಕರ ತಾಯಿ ಶ್ರೀಮತಿ ಕುಸುಮಾ ಪೂಜಾರಿಮನೆ ದೀಪ ಪ್ರಜ್ವಲಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ನೆಟ್ ಕಾಂ, ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಡಾ.ಲೀಲಾಧರ ಡಿ.ವಿ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ,
ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶೀಲಾ ಅರುಣ್ ಕುರುಂಜಿ ಯವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿತೈಷಿ ಬಂಧು ಮಿತ್ತರಾದ ಮಹೇಶ್ ಪೂಜಾರಿಮನೆ,ಪದ್ಮಯ್ಯ ಪೂಜಾರಿಮನೆ, ಬೆಳ್ಯಪ್ಪ ಪೂಜಾರಿಮನೆ, ಶ್ರೀಮತಿ ಭಾಗೀರಥಿ ಮಹೇಶ್ ಪೂಜಾರಿಮನೆ, ಪ್ರಭಾಕರ ಪೂಜಾರಿಮನೆ, ಕುಲಾಶ್ರೀ ಬಾಕಿಲ,ದಾಮೋದರ ಪೂಜಾರಿಮನೆ, ಭರತ ಪೂಜಾರಿಮನೆ , ಮಯೂರಿ ರೆಸ್ಟೋರೆಂಟ್ ಮಾಲಕ ವಿಜಯ್ ಮಯೂರಿ, ನಮನ ಚಿಕನ್ ಸೆಂಟರ್ ಮಾಲಕ ಲತೀಶ್ ಗುಂಡ್ಯ,
ವರ್ಷಿತ್ ಚೊಕ್ಕಾಡಿ, ಪ್ರಕಾಶ್ ಯಾದವ್, ನವೀನ್ ಎಲಿಮಲೆ, ಸನತ್ , ಸುರೇಶ್, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು. ವಿ ಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
ಹವಾ ನಿಯಂತ್ರಿತ ಕೆಫೆಯಾಗಿದ್ದು ಒಳಂಗಾಣದಲ್ಲಿ ಅತ್ಯಾಕರ್ಷಕ ಆಧುನಿಕ ಶೈಲಿಯ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಇರುವುದು. ವಿವಿಧ ಬಗೆಯ ತಾಜಾ ಹಣ್ಣಿನ ಜ್ಯೂಸ್ ಹಾಗೂ ಚೈನೀಸ್ ,ಇಂಡಿಯನ್,
ಅರೆಬಿಕ್ ಆಹಾರ ಖಾದ್ಯಗಳು ಮತ್ತು ಚಾಟ್ಸ್ ಐಟಂಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.