ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್(ರಿ.) ಕಳಂಜ ಇದರ ವಾರ್ಷಿಕ ಮಹಾಸಭೆಯು ಏ.01ರಂದು ನಡೆಯಿತು. ಮಹಾಸಭೆಯಲ್ಲಿ ವಾರ್ಷಿಕ ಜಮಾ-ಖರ್ಚಿನ ಲೆಕ್ಕಪತ್ರ ಮಂಡಿಸಿ ಸರ್ವಾನುಮತದಿಂದ ಅನುಮೋದಿಸಲಾಯಿತು. ನಂತರ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ಸೇವಾ ಟ್ರಸ್ಟಿನ ಗೌರವಾಧ್ಯಕ್ಷರಾಗಿ ರಘುನಾಥ ರೈ ಕಳಂಜ, ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ನಾಲ್ಗುತ್ತು, ಕಾರ್ಯದರ್ಶಿಯಾಗಿ ಸತೀಶ್ ಕಳಂಜ, ಉಪಾಧ್ಯಕ್ಷರಾಗಿ ರವೀಂದ್ರನಾಥ ರೈ ಗುರಿಕ್ಕಾನ, ಕೋಶಾಧಿಕಾರಿಯಾಗಿ ರಾಜೇಶ್ ಪಟ್ಟೆ, ಜೊತೆ ಕಾರ್ಯದರ್ಶಿಯಾಗಿ ಗಗನ್ ನಾಲ್ಗುತ್ತು ಆಯ್ಕೆಯಾದರು.
- Thursday
- November 21st, 2024