ಐನೆಕಿದು ಗ್ರಾಮದ ಕೂಜುಗೋಡು ಕಟ್ಟೆಮನೆ ತರವಾಡು ಶ್ರೀ ಕೆಂಚಾಂಬದೇವಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.29 ಮತ್ತು 30 ರಂದು ನಡೆದರೆ, ಎ.1ರಂದು ಶ್ರೀ ರುದ್ರಚಾಮುಂಡಿ ಮತ್ತು ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ಧರ್ಮ ನಡಾವಳಿ ನಡೆಯುವುದು.
ಮಾ.29 ರಂದು ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ ನಡೆದು ವಿವಿಧ ಪೂಜಾ ಕಾರ್ಯಗಳು ನಡೆದವು. ಮಾ.30ರಂದು ಬೆಳಗ್ಗೆ ಮೀನ ಲಗ್ನದ ಮುಹೂರ್ತದಲ್ಲಿ ಶ್ರೀ ಕೆಂಚಾಂಬ ದೇವಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ಸ ಪರಿವಾರ ದೈವಗಳ ಪ್ರತಿಷ್ಠಾ ಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ ಮಂತ್ರಾಕ್ಷತೆ ಮತ್ತು ಅನ್ನಸಂತರ್ಪಣೆ ನಡೆಯಿತು.
ಇಂದು ಭಂಡಾರ ಹಿಡಿದು, ಕುಲೆಭೂತ ಜ್ಯಾವತೆ ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯುವುದು. ಎ.2ರಂದು ಬೆಳಗ್ಗೆ ಶ್ರೀ ರುದ್ರಚಾಮುಂಡಿ ಧರ್ಮದೈವ, ಪುರುಷಭೂತ, ವರ್ಣಾರ ಪಂಜುರ್ಲಿ, ಅಂಗರ ಬಾಕುಡ, ಪಿಲಿಭೂತ, ಗುಳಿಗ ದೈವಗಳ ನೇಮೋತ್ಸವ ನಡೆಯುವುದು.