ವಿಧಾನಪರಿಷತ್ತು ಚುನಾವಣೆ ಕಣದಲ್ಲಿ ಏಳು ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಜೂ 22ರಂದು ಘೋಷಿಸಿದ್ದಾರೆ.
ಜೂನ್ 30ರಂದು ನಿವೃತ್ತರಾಗಲಿರುವ ವಿಧಾನಪರಿಷತ್ತಿನ ಏಳು ಸದಸ್ಯರ ಸ್ಥಾನಗಳನ್ನು ತುಂಬಲು ಜೂನ್ 29ರಂದು ವಿಧಾನಪರಿಷತ್ ದೈ ವಾರ್ಷಿಕ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿತ್ತು.
ಅದರಂತೆ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಜೂನ್ 19ರಂದು ನಡೆದ ನಾಮಪತ್ರಗಳನ್ನು ಪರಿಶೀಲನೆಯಲ್ಲಿ 9 ಅಭ್ಯರ್ಥಿಗಳ ಪೈಕಿ ಎರಡು ಅಭ್ಯರ್ಥಿಗಳ ನಾಮಪತ್ರಗಳು ಸೂಚಕರ ಸಹಿ ಹೊಂದಿಲ್ಲದ ಕಾರಣ ತಿರಸ್ಕೃತಗೊಂಡಿತ್ತು. ಉಳಿದ ಏಳು ಮಂದಿ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು,ನಾಮಪತ್ರ ಹಿಂತೆಗೆದುಕೊಳ್ಳಲು ಸೋಮವಾರ ಕೊನೆಯ ದಿನವಾಗಿದ್ದು ಅಭ್ಯರ್ಥಿಗಳಲ್ಲಿ ಯಾವ ಒಬ್ಬರು ನಾಮಪತ್ರ ಹಿಂಪಡೆಯಲಿಲ್ಲ. ಭರ್ತಿ ಮಾಡಬೇಕಾದ ಏಳು ವಿಧಾನ ಪರಿಷತ್ತಿನ ಸ್ಥಾನಗಳಿಗೆ ಅಭ್ಯರ್ಥಿಗಳು ಕಣದಲ್ಲಿ ಇರುವುದರಿಂದ ಬಿಜೆಪಿಯ ಎಂಟಿಬಿ ನಾಗರಾಜ್, ಪ್ರತಾಪ್ ಸಿಂಹ ನಾಯಕ್, ಆರ್ ಶಂಕರ್ , ಸುನಿಲ್ ವಲ್ಯಾಪುರ, ಕಾಂಗ್ರೆಸ್ ಪಕ್ಷದ ನಸೀರ್ ಅಹ್ಮದ್ ಹಾಗೂ ಬಿಕೆ ಹರಿಪ್ರಸಾದ್, ಮತ್ತು ಜಾತ್ಯತೀತ ಜನತಾದಳದ ಗೋವಿಂದರಾಜು ಅವರು ವಿಧಾನಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ಘೋಷಿಸಿದರು.
- Friday
- November 22nd, 2024