Ad Widget

ಅಂಗಾರರನ್ನೇ ಅಭ್ಯರ್ಥಿಯಾಗಿ ಫೋಷಿಸಬೇಕು- ಪರವೂರ ಅಭ್ಯರ್ಥಿಗಳು ಬೇಡ ಹಿಂದೂ ಭಾವೈಕ್ಯ ಪರಿಶಿಷ್ಠ ಜಾತಿ ಸಮನ್ವಯ ವೇದಿಕೆ ಆಗ್ರಹ

. . . . . . . . .

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ವಿಧಾನಸಭಾ ಕ್ಷೇತ್ರದ ಈಗಿನ ಶಾಸಕ ಎಸ್. ಅಂಗಾರ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದು. ಎಂದು ಹಿಂದೂ ಭಾವೈಕ್ಯ ಪರಿಶಿಷ್ಠ ಜಾತಿ ಸಮನ್ವಯ ವೇದಿಕೆಯ ಮುಖಂಡರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಮುಖಂಡ ಸಂಜಯ್ ಕುಮಾರ್ ಪೈಚಾರ್‌ರವರು ಮಾತನಾಡಿ ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರವಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಆರು ಅವಧಿಯಲ್ಲಿ ಬಿಜೆಪಿಯಿಂದ ಎಸ್ ಅಂಗಾರ ಅವರು ಗೆದ್ದು ಶಾಸಕರಾಗಿದ್ದೂ, ಇದೀಗ ಸಚಿವರೂ ಆಗಿದ್ದಾರೆ. ಇವರ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದರೆ ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಬದಲಾವಣೆ ಮಾಡಲಾಗುತ್ತದೆ ಎಂಬ ವದಂತಿ ಇದ್ದು, ಸುಳ್ಯ ವಿಧಾನಸಭಾ ಕ್ಷೇತ್ರ ಬಿಟ್ಟು ಹೊರಗಿನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸುಳ್ಯ ಕ್ಷೇತ್ರದಲ್ಲಿ ಅರ್ಹ ಅಭ್ಯರ್ಥಿಗಳು ಇದ್ದಾರೆ. ಅವರಲ್ಲೊಬ್ಬರನ್ನು ಕಣಕ್ಕಿಳಿಸಲಿ. ಹೊರಗಿನ ಅಭ್ಯರ್ಥಿಗಿಂತ ಎಸ್. ಅಂಗಾರ ಅವರಿಗೆ ಅವಕಾಶ ನೀಡುವುದು ಒಳಿತು ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ಸಮಿತಿಯ ಮುಖಂಡ ಕೇಶವ ಮಾಸ್ತರ್ ಹೊಸಗದ್ದೆ ಮಾತನಾಡಿ ಸುಳ್ಯದಲ್ಲಿ ಪಕ್ಷಕ್ಕಾಗಿ ದುಡಿದವರು ಇದ್ದರೆ ಅವರನ್ನು ಹೊರತು ಪಡಿಸಿ ಹೊರಗಿನಿಂದ ಅಭ್ಯರ್ಥಿಗಳನ್ನು ತಂದು ನಿಲ್ಲಿಸುವುದನ್ನು ನಾವು ವಿರೋಧಿಸುತ್ತೇವೆ ಇತ್ತೀಚಿಗೆ ಮಾಧ್ಯಮಗಳಲ್ಲಿ ಹಲವು ಹೆಸರುಗಳು ಕೇಳಿ ಬರುತ್ತಿದ್ದು, ಇವೆಲ್ಲವು ಸತ್ಯಕ್ಕೆ ದೂರವಾದ ಮಾತುಗಳು. ಪಕ್ಷದಲ್ಲಿ ಚುನಾವಣೆಗೆ ಯಾರು ನಿಲ್ಲಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ಮತ್ತು ಸಂಘಟನೆ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು. ಜಗನ್ನಾಥ ಜಯನಗರ ಮಾತನಾಡಿ ಹಿಂದೂ ಭಾವೈಕ್ಯ ಪರಿಶಿಷ್ಠ ಜಾತಿ ಸಮನ್ವಯ ವೇದಿಕೆಯನು ಚುನಾವಣೆಯ ಹಿತ ದೃಷ್ಟಿಯಿಂದ ರಚಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಸಮುದಾಯದ ಜನಾಂಗದ ಪರವಾಗಿ, ಮತ್ತು ಅವರ ಅಭಿವೃದ್ಧಿಗಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗುವುದು. ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಇಂದಿಗೂ ಕೂಡ ನಮ್ಮ ಸಮುದಾಯದ ಜನರು ಸಂಕಷ್ಟದಲ್ಲಿದ್ದಾರೆ. ಅಂಥವರ ಸೇವೆ ಅಭಿವೃದ್ಧಿಗಾಗಿ ಈ ವೇದಿಕೆ ಕಾರ್ಯಚರಿಸಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ವೇದಿಕೆಯ ಮುಖಂಡರುಗಳಾದ ಶಂಕರ್ ಪೆರಾಜೆ, ಅಚ್ಚುತ ಗುತ್ತಿಗಾರು, ಪ್ರಕಾಶ್ ಬಂಗ್ಲೆಗುಡ್ಡೆ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading