Ad Widget

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಷನ್ 2047 ಸಂವಹನ ಕಾರ್ಯಕ್ರಮ

. . . . . . .

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ “Role of Youth in Building a better nation: Vision – 2047” ಎಂಬ ವಿಷಯದಲ್ಲಿ ಸಂವಹನ ಕಾರ್ಯಕ್ರಮವು ಫೆ.22ರಂದು ಕೆ.ವಿ.ಜಿ.ಸಿ.ಇ. ಅಡಿಟೋರಿಯಂನಲ್ಲಿ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರ ಸರಕಾರದ ದಿಶಾ ಕಮಿಟಿಯ ಸದಸ್ಯರಾದ ಶ್ರೀ ಕೆ. ರಮೇಶ್ ಅವರು ಆಗಮಿಸಿ, ಸರಕಾರದ ಅನುದಾನಿತ ಯೋಜನೆಗಳ ಬಗ್ಗೆ ಸವಿವರವಾಗಿ ವಿವರಿಸಿದರು. ಭಾರತೀಯ ಪ್ರಜೆಯಾಗಿ ಪ್ರತಿಯೊಬ್ಬರ ಜವಾಬ್ದಾರಿಯು ದೇಶದ ಒಳಿತಿಗಾಗಿ ವಿನಿಯೋಗವಾಗಬೇಕೆಂದು ಪ್ರಸ್ತುತಪಡಿಸಿದರು. ಸಮಾರಂಭಕ್ಕೆ ಆಗಮಿಸಿದ ಇನ್ನೋರ್ವ ಅತಿಥಿಯಾದ ಸುಳ್ಯ ನಗರ ಸಭಾ ಅಧ್ಯಕ್ಷರಾದ ಶ್ರೀ ವಿನಯ ಕುಮಾರ್ ಕಂದಡ್ಕರವರು ಮಾತನಾಡಿ, ಸುಳ್ಯದಲ್ಲಿ ಕಸದ ಸಮಸ್ಯೆಗೆ ತೆಗೆದುಕೊಂಡ ಕ್ರಮ ಮತ್ತು ಕಸವನ್ನು ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಉಪಯೋಗಿಸಿಕೊಂಡ ಪ್ರಾಜೆಕ್ಟ್‌ನ ಬಗ್ಗೆ ವಿವರಿಸಿ ಮುಂಬರುವ ದಿನಗಳಲ್ಲಿ ಸುಳ್ಯದ ಕೆಲವು ಸಮಸ್ಯೆಗಳಿಗೆ ತಾಂತ್ರಿಕ ನೆರವಿನ ಅಗತ್ಯತೆಯನ್ನು ಕಾಲೇಜಿನ ವಿದ್ಯಾರ್ಥಿಗಳು ಯಾವ ರೀತಿ ಕೈಜೋಡಿಸಿ ಪರಿಹಾರ ಒದಗಿಸುವ ಬಗ್ಗೆ ವಿಮರ್ಷಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ವಹಿಸಿದರು. ಕಾರ್ಯಕ್ರಮ ಸಂಯೋಜಕರಾದ ಡೀನ್-ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಮಾಶಂಕರ್ ಕೆ.ಎಸ್. ಅತಿಥಿಗಳನ್ನು ಸ್ವಾಗತಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಎ. ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕಾರಾದ ಪ್ರೊ. ಪ್ರಶಾಂತ್ ಕಕ್ಕಾಜೆಯವರು ಕಾರ್ಯಕ್ರಮಕ್ಕೆ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!