Ad Widget

*ಕನಕಮಜಲು ಯುವಕ ಮಂಡಲದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ*


ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಯುವಜನ ವಿಕಾಸ ಕೇಂದ್ರ ಯುವಕ ಮಂಡಲ (ರಿ) ಕನಕಮಜಲು ಇದರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಿವೈನ್ ಪಾರ್ಕ್ ನ ಯೋಗ ತರಬೇತುದಾರರಾದ ಷಣ್ಮುಖ ಕುತ್ಯಾಳ ಅವರು ದೈನಂದಿನ ಜೀವನದಲ್ಲಿ ನಮ್ಮ ಶರೀರವನ್ನು ಸಧೃಡಗೊಳಿಸುವ ಬಗ್ಗೆ ಯೋಗಾಭ್ಯಾಸ ವನ್ನು ನೀಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಕೃ.ಪ.ಸ.ಸಂಘದ ಉಪಾಧ್ಯಕ್ಷ ಶ್ರೀ ನಾರಾಯಣ ಗೌಡ ಬೊಮ್ಮೆಟ್ಟಿ, ಕನಕಮಜಲು ಗ್ರಾ.ಪಂ.ಉಪಾಧ್ಯಕ್ಷ ಶ್ರೀಧರ್ ಕುತ್ಯಾಳ, ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ, ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಹಾಗೂ ಯುವಕ ಮಂಡಲದ ಪೂರ್ವಾಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮೋಹನ್ ಮಾಸ್ಟರ್ ಸಾರಕೋಟೆಲು ಸ್ವಾಗತಿಸಿ, ಅಧ್ಯಕ್ಷ ಜಯಪ್ರಸಾದ್ ಕಾರಿಂಜ ವಂದಿಸಿದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!