Ad Widget

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 2023-24ನೇ ಸಾಲಿನ ಪ್ರಥಮ ವರ್ಷದ ಎಂ.ಬಿ.ಎ. ಹಾಗೂ ಎಂ.ಟೆಕ್.
ವಿದ್ಯಾರ್ಥಿಗಳಿಗೆ ಸ್ವಾಗತ

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ಹಾಗೂ ಎಂ.ಟೆಕ್. ಸ್ನಾತಕೋತ್ತರ ಪದವಿಯ ಮೊದಲನೆಯ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವು ಕೆ.ವಿ.ಜಿ.ಸಿ.ಇ. ಸಂಸ್ಥೆಯ ಸಭಾಂಗಣದಲ್ಲಿ ಫೆ.15ರಂದು ನಡೆಯಿತು.
ಎಂ.ಬಿ.ಎ. ವಿದ್ಯಾರ್ಥಿನಿಯರಾದ ಕು. ಅನುಷಲಕ್ಷ್ಮಿ ಮತ್ತು ಕು. ದೀಕ್ಷ ಎಸ್. ಪ್ರಾರ್ಥನೆ ಮಾಡುವುದರೊಂದಿಗೆ ಆರಂಭವಾದ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಯರಾದ ಕಮಿಲ ಕೆಮಿಕಲ್ ಸಂಸ್ಥೆಯ ಮಾಲಕರಾದ ಶ್ರೀ ಕೆ.ವಿ. ಸುರೇಶ್ಚಂದ್ರ ಇವರು ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವುದೇ ಉದ್ಯಮ ಅಥವಾ ಕೈಗಾರಿಕೆ ನಡೆಸಲು ನಿರ್ದಿಷ್ಟವಾದ ಗುರಿ ಮತ್ತು ಕಾರ್ಯಯೋಜನೆಯ ಧೈರ್ಯದ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಶುಭ ಹಾರೈಸಿದರು.
ಡಾ. ರೇಣುಕಾಪ್ರಸಾದ್ ಕೆ.ವಿ., ಪ್ರಧಾನ ಕಾರ್ಯದರ್ಶಿಗಳು, ಎ.ಒ.ಎಲ್.ಇ(ರಿ) ಪ್ರಸಕ್ತ ವರ್ಷ ಎಂ.ಬಿ.ಎ. ಸೀಟುಗಳು ಪೂರ್ಣಭರ್ತಿಗೊಂಡ ಸಂತಸವನ್ನು ಶುಭ ಹಾರೈಕೆ ಕಳುಹಿಸುವುದರೊಂದಿಗೆ ಹಂಚಿಕೊಂಡರು. ಅತಿಥಿಸ್ಥಾನದಿಂದ ಮಾತನಾಡಿದ ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು/ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ.ಯವರು ಪದವಿ ಪಡೆದ ನಂತರ ಜವಾಬ್ದಾರಿಯುತರಾಗಿ, ಧೈರ್ಯ, ಸ್ವಪ್ರಯತ್ನ ಮತ್ತು ಸಮರ್ಪಕ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡಲ್ಲಿ ಯಾವುದೇ ಉದ್ಯಮ ಅಥವ ಉದ್ಯೋಗದಲ್ಲಿ ತೊಡಗಿಸಿಕೊಂಡರೂ ಯಶಸ್ಸನ್ನು ಸಾಧಿಸಲು ಸಾಧ್ಯವೆಂದೂ, ಇದಕ್ಕೆ ಪೂರಕವಾಗಿ ಉದಾಹರಿಸಿ, ಕನಿಷ್ಟ ಮಟ್ಟದಿಂದ ಆರಂಭಿಸಿ ಇಂದು ಹತ್ತಾರು ಜನಕ್ಕೆ ಉದ್ಯೋಗ ಕಲ್ಪಿಸಿದ ಯಶಸ್ವಿ ಉದ್ಯಮಿ ಶ್ರೀ ಕಮಿಲ ಸುರೇಶ್ಚಂದ್ರರ ಬಗ್ಗೆ ಹೆಮ್ಮೆಯ ಮಾತನಾಡಿದರು. ಸಮಾರಂಭದ ಅಧ್ಯಕ್ಷ ಸ್ಥಾನವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ.ಯವರು ವಿದ್ಯಾರ್ಥಿಗಳಿಗೆ ಸ್ವಾಗತವನ್ನು ಬಯಸುತ್ತಾ ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಉದ್ಯೋಗ ಹಾಗೂ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿರುವಂತೆ ವಿದ್ಯಾರ್ಥಿಗಳು ಸಂಸ್ಕಾರ, ಸಮಯ ಮತ್ತು ಶ್ರದ್ಧೆಯಿಂದ ಶಿಸ್ತನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಎಂಬಿ.ಎ. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಇಮ್ಯಾಕ್ಯುಲೇಟ್ ಮೇರಿ ಅತಿಥಿಗಳನ್ನು ಪರಿಚಯಿಸಿದರು. ಅತಿಥಿಗಳನ್ನು ಹಾಗೂ ಸಭಾ ಸದರನ್ನು ಡಾ. ಭಾಗ್ಯ ಹೆಚ್.ಕೆ. ಸ್ವಾಗತಿಸಿ ಎಂ.ಬಿ.ಎ. ವಿಭಾಗ ಮುಖ್ಯಸ್ಥರಾದ ಪ್ರೊ. ಕೃಷ್ಣಾನಂದ ಎ. ಧನ್ಯವಾದ ಸಮರ್ಪಿಸಿದರು. ಸಹಾಯಕ ಪ್ರಾಧ್ಯಾಪಕರುಗಳಾದ ಅರುಣ ಪಿ.ಜಿ ಹಾಗೂ ಅಶ್ವಿಜ ಕೆ.ಸಿ ಇವರು ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading