Ad Widget

ಹಿರಿಯ ದೈವರಾಧಕ ಸೂರಪ್ಪ ಗೌಡ ಕೊಳೆಂಜಿಕೋಡಿ ಅವರಿಗೆ ಕಾಂಚೋಡು ದೇವಾಲಯದ ಧರ್ಮದರ್ಶಿಗಳಿಂದ ಸನ್ಮಾನ

. . . . .

✍️ ಭಾಸ್ಕರ ಗೌಡ ಜೋಗಿಬೆಟ್ಟು

ತುಳುನಾಡಿನ ದೈವರಾಧನೆಗೆ ಮೂಲ ಚೌಕಟ್ಟನ್ನು ಮಾಡಿ ಭಯ , ಭಕ್ತಿಯಿಂದ ಆಚರಿಕೊಂಡು , ಬೆಳೆಸಿಕೊಂಡು ಬಂದವರು ನಮ್ಮ ಹಿರಿಯರು. ನಮ್ಮ ಹಿರಿಯರು ನಮ್ಮ ಮಾರ್ಗದರ್ಶಕರು.ದೈವರಾಧನೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಸೂರಪ್ಪ ಗೌಡ ಕೊಳೆಂಜಿಕೋಡಿ ಅವರನ್ನು ಕಾಂಚೋಡು ಮಂಜುನಾಥೇಶ್ವರ ದೇವಾಲಯದ ಧರ್ಮದರ್ಶಿಗಳು ಸನ್ಮಾನಿಸಿದರು.

ಗೌಡ ಸಮಾಜಕ್ಕೂ ದೈವರಾಧನೆಗೂ ವಿಶೇಷವಾದ ಸಂಬಂಧವಿದ್ದು, ಪೂರ್ವಜರ ಕಾಲದಲ್ಲಿ ಗೌಡ ಸಮಾಜಕ್ಕೆ ಸೇರಿದ ಜನರು ದೈವಗಳ ಚಾಕರಿಯನ್ನು ಚಾಚು ತಪ್ಪದೆ ಮಾಡುತ್ತಿದ್ದರು. ಹೀಗೆಯೆ ಹಿರಿಯರಾದ ಸೂರಪ್ಪ ಗೌಡರಿಗೆ ವಿಶೇಷವಾದ ಆಸಕ್ತಿ , ಭಕ್ತಿ ಇದೆ. ಈಗ 70-80 ರ ಇಳಿಯ ವಯಸ್ಸು. ತನ್ನ ಜೀವನದುದ್ದಕ್ಕೂ ಕಲ್ಲುರ್ಟಿ, ಗುಳಿಗ, ಕಲ್ಲೇರಿತ್ತಾಯ , ಧರ್ಮದೈವಗಳು ಸೇರಿದಂತೆ ಹಲವಾರು ದೈವಗಳ ಚಾಕರಿಯನ್ನು ಮಾಡಿದ ಅನುಭವ ಇವರಿಗಿದೆ.ದೈವರಾಧನೆಯ ಚೌಕಟ್ಟು, ಕಟ್ಟುಪಾಡುಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದರು( ಈಗಲೂ ಮಾಡುತ್ತಾರೆ). ಈಗ ವಯಸ್ಸಾಗಿರುವ ಕಾರಣ ದೈವದ ಚಾಕರಿಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ದೈವರಾಧನೆಯ ಬಗ್ಗೆ ಅನುಭವ , ವಿಶೇಷ ಜ್ಞಾನ ಸಂಪದನೆ ಹೊಂದಿರುವ‌ ಇವರು ಕಿರಿಯರಿಗೆ ಮಾರ್ಗದರ್ಶಕರಾಗಿದ್ದಾರೆ. ಇವರು ಕೊಳೆಂಜಿಕೋಡಿ ಗುತ್ತು ಮನೆತನದ ದಿ.ಕಾಳಪ್ಪ ಗೌಡರ ಹಿರಿಯ ಮಗ. ಇವರ ಊರಿನಲ್ಲಿ ಸೂರಪ್ಪ ಗೌಡ ಕೊಳೆಂಜಿಕೋಡಿ ಅವರಿಗೆ ಉನ್ನತ ಮಟ್ಟದ ಗೌರವವಿದೆ. ದೈವರಾಧನೆಗೆ ಸಂಬಂಧಿಸಿದ ಯಾವುದೆ ಕಾರ್ಯಕ್ರಮ, ನೇಮ,ಕೋಲಗಳಿದ್ದಲ್ಲಿ ಇವರನ್ನ ಕರೆಯುತ್ತಾರೆ. ಕೊಳೆಂಜಿಕೋಡಿ ಕುಟುಂಬಕ್ಕೆ ಸಂಬಂಧ ಪಟ್ಟ ದೈವಸ್ಥಾನದ ಜೀರ್ಣೋದ್ಧಾರದ ಸಂದರ್ಭದಲ್ಲಿ ತಾವೇ ಮಾರ್ಗದರ್ಶನವನ್ನು ನೀಡುತ್ತಾ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದರು. ಅಲ್ಲದೆ ಕುಟುಂಬದ ದೈವಗಳ ಚಾಕರಿಯನ್ನು ತಾವೆ ಮಾಡಿಕೊಂಡು ಹೋಗುತ್ತಿದ್ದರು.

ಜೀರ್ಣಾ ವ್ಯವಸ್ಥೆಯಲ್ಲಿದ್ದ ಕಲ್ಲೇರಿತ್ತಾಯ ದೈವದ ಸಾನಿಧ್ಯ ಹುಡುಕಿಕೊಟ್ಟ ಹೆಗ್ಗಳಿಕೆ

3-4 ಶತಮಾನಗಳ ಐತಿಹ್ಯ ಇರುವ ಕಾಂಚೋಡು ಮಂಜುನಾಥೇಶ್ವ ದೇವಾಲಯವು ಪೂರ್ವಜರ ಕಾಲದಲ್ಲಿ ಆರಾಧನೆಯನ್ನು ಪಡೆದಕೊಳ್ಳುತ್ತಿತ್ತು. ದೇವಾಲಯದ ಈಶಾನ್ಯ ದಿಕ್ಕಿನಲ್ಲಿ ಹಚ್ಚ ಹಸಿರಿನಿಂದ ಕೂಡಿದ ದಟ್ಟ ಅರಣ್ಯದ ನಡುವೆ ಪ್ರಶಾಂತವಾದ ವಾತಾವರಣದಲ್ಲಿ ಅಣ್ಣಪ್ಪ ಸ್ವಾಮಿ ನೆಲೆಸಿದ್ದಾನೆ. ಅಣ್ಣಪ್ಪ ಸ್ವಾಮಿ ಜೊತೆ ವರ್ಣರ ಪಂಜುರ್ಲಿ , ಕಾಳರಾಹಿ, ಕುಮಾರಸ್ವಾಮಿ ಸೇರಿದಂತೆ ಹಲವಾರು ಧರ್ಮದೈವಗಳು ಆರಾಧನೆ ಪಡೆದುಕೊಳ್ಳುತ್ತಿವೆ. ಇಲ್ಲಿಗೆ ಅಣ್ಣಪ್ಪ ಮಾಡವೆಂದು ಹೆಸರು. ಈ ಅಣ್ಣಪ್ಪ ಮಾಡದಿಂದ ದೂರದ ಎತ್ತರ ಪ್ರದೇಶದಲ್ಲಿ ಕಾಂಚೋಡು ಬೀಡಿನ ಪಟ್ಟ ದೈವ ಆರಾಧನೆ ಪಡೆದುಕೊಳ್ಳುತ್ತಿದ್ದಾನೆ.ಆದರೆ ಈ ದೈವಗಳ ಆರಾಧನೆ ಕಾರಣಾಂತರಗಳಿಂದ ಹಲವಾರು ವರ್ಷ ನಿಂತು ಹೋಗಿತ್ತು. ಪೂರ್ವಜರ ಕಾಲದಲ್ಲಿ ಈ ಎಲ್ಲ ಸಾನಿಧ್ಯಗಳು ನಿರ್ಮಾಣಗೊಂಡಿದ್ದವು. ಅದೊಂದು ದಿನ ಕಾಂಚೋಡು ಮಂಜುನಾಥೇಶ್ವರ ದೇವಾಲಯದ ಈಗಿನ ಧರ್ಮದರ್ಶಿಗಳಿಗೆ ದೈವ ನಿಲೆ ಆಗಿರುವ ಬಗ್ಗೆ ಕನಸೊಂದು ಬೀಳುತ್ತದೆ. ಈ ವಿಚಾರವನ್ನು ಸೂರಪ್ಪ ಗೌಡ ಕೊಳೆಂಜಿಕೋಡಿ ಅವರೊಟ್ಟಿಗೆ ಚರ್ಚಿಸಿದಾಗ ಕೊಳೆಂಜಿಕೋಡಿ ಗುತ್ತು ಮನೆತನದ ತಪ್ಪಲಿನಲ್ಲಿ ಅಜೀರ್ಣ ವ್ಯವಸ್ಥೆಯಲ್ಲಿ ಇದ್ದ ದೈವ ಸಾನಿಧ್ಯದ ಮಾಹಿತಿ ನೀಡುತ್ತಾರೆ. ತದನಂತರ ಇಬ್ಬರು ಪರಿಶೋಧನೆಗಿಳಿದು ಹುಡುಕಿಕೊಂಡು ಹೋಗಿ ದಟ್ಟ ಅರಣ್ಯದ ನಡುವೆ ಮಣ್ಣಿನ ಗೋಡೆ ಮುಳಿ ಹುಲ್ಲಿನ ಮಾಡಿನಿಂದ ಮಾಡಲ್ಪಟ್ಟ ಜೀರ್ಣಾವಸ್ಥೆಯಲ್ಲಿದ್ದ ಕುರುಹುಗಳನ್ನು ಕಾಣುತ್ತಾರೆ. ನಂತರ ಈ ಪ್ರದೇಶದಲ್ಲಿ ದೈವ ಸಾನಿಧ್ಯವನ್ನು ಜೀರ್ಣೋದ್ಧಾರ ಮಾಡಿ ಕಲ್ಲೇರಿತ್ತಾಯ ಮಾಡ ಆಯಿತು. ಹೆಗ್ಗಡೆಯವರಲ್ಲಿ ಕನಸಿನಲ್ಲಿ ಬಂದ ದೈವ , ಸೂರಪ್ಪ ಗೌಡರು ತೋರಿಸಿಕೊಟ್ಟ ಅಜೀರ್ಣವಸ್ಥೆಯಲ್ಲಿದ್ದ ಕಲ್ಲೇರಿತ್ತಾಯ ದೈವ ಈಗ ವರ್ಷಂಪ್ರತಿ ಆರಾಧನೆ ಪಡೆಯುತ್ತಾ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಾನೆ. ಜೀರ್ಣೋದ್ಧಾರವಾಗಿ ಕಲ್ಲೇರಿತ್ತಾಯನ ದೈವ ಚಾಕರಿಯನ್ನು ಮಾಡುವ ಸೌಭಾಗ್ಯ ಸೂರಪ್ಪ ಗೌಡ ಕೊಳೆಂಜಿಕೋಡಿ ಅವರಿಗೆ ದೊರಕಿತು. ನಂತರ 2-3 ವರ್ಷಗಳ ಕಾಲ ದೈವದ ಚಾಕರಿಯನ್ನು ಮಾಡಿದರು. ಒಟ್ಟಾಗಿ ಕಾಂಚೋಡು ಬೀಡಿನ ಪಟ್ಟದ ದೈವದ ಜೀರ್ಣೋದ್ಧಾರಕ್ಕೆ ಸೂರಪ್ಪ ಗೌಡ ಕೊಳೆಂಜಿಕೋಡಿ ಅವರೂ ಕಾರಣಕರ್ತರಾದರು.

ದೈವರಾಧನೆಯ ವಿಚಾರದಲ್ಲಿ ಇವರಿಗಿರುವ ಒಲವು , ಆಸಕ್ತಿ,ಭಕ್ತಿ ,ಹುಮ್ಮಸ್ಸು ಇಂದಿನ ಯುವ ಸಮೂಹಕ್ಕೆ ಬರಲಿ .ನಮ್ಮ ದೈವರಾಧನೆಯನ್ನು ಚೌಕಟ್ಟಿನ ಒಳಗೆ ಆರಾಧಿಸಿಕೊಂಡು ಬಂದರೆ ನಮಗೆ ಒಳಿತಾಗಬಹುದು.ನಮ್ಮ ಸಂಸ್ಕೃತಿ ಉಳಿಯಬಹುದು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!