Ad Widget

ಫೆ.23 ರಿಂದ ಫೆ.27 ರವರೆಗೆ ಪಾಲೆಪ್ಪಾಡಿ ಶ್ರೀ ಇರ್ವೆರ್ ಉಳ್ಳಾಕ್ಲು ದೈವಸ್ಥಾನ ಹಾಗೂ ಪರಿವಾರ ದೈವಗಳ ದೈವಸ್ಥಾನ ಮತ್ತು ಪಂಜುರ್ಲಿ ದೈವಸ್ಥಾನದ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

. . . . . . . . .

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀ ಇರ್ವೆರ್ ಉಳ್ಳಾಕ್ಲು, ಪರಿವಾರ ದೈವಗಳ ಮತ್ತು ಪಾಲೆಪ್ಪಾಡಿ ಶ್ರೀ ಪಂಜುರ್ಲಿ ದೈವದ ಹಾಗೂ ದರ್ಖಾಸ್ತು ಉಳ್ಳಾಕ್ಲು,ಅಡ್ಯಂತಾಯ ಕಟ್ಟೆಯ ನವೀಕರಣ ಪ್ರತಿಷ್ಠಾ ಕಲಶವು ಫೆ.23 ರಿಂದ ಫೆ.27 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಫೆ.23 ರಂದು ಸಂಜೆ ಗಂಟೆ 5:00 ಕ್ಕೆ ತಂತ್ರಿಗಳ ಆಗಮನ, ಸಾಯಂಕಾಲ ಗಂಟೆ 6:30 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿಶ್ರೀ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ಉಗ್ರಾಣ ಮುಹೂರ್ತ,ರಾಕ್ಷಘ್ನಹೋಮ, ವಾಸ್ತುಪೂಜಾ ಬಲಿ, ಪ್ರಕಾರಬಲಿ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ.

. . . . . . .


ಫೆ.24 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ,ಬೆಳಿಗ್ಗೆ ಗಂಟೆ 9:05 ರ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಇರ್ವೆರ್ ಉಳ್ಳಾಕ್ಲು ಅಡ್ಯಂತಾಯ,ಪಂಜುರ್ಲಿ ಹಾಗೂ ಪರಿವಾರ ದೈವಗಳ ನವೀಕರಣ ಪ್ರತಿಷ್ಠೆಸಾನಿಧ್ಯ ಕಲಶಾಭಿಷೇಕ ತಂಬಿಲ ಸೇವೆ,ಮಂಗಳಾರತಿ,ನೈಮಿತ್ತಿಕ ನಿಯಮ ಪ್ರಾರ್ಥನೆ,ಪ್ರಸಾದ ವಿತರಣೆ ನಡೆಯಲಿದೆ. ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಫೆ.25 ರಂದು ಸಂಜೆ 6.00 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.


ಕುದ್ರೋಳಿ ನಾರಾಯಣಗುರು ಕಾಲೇಜು ಉಪನ್ಯಾಸಕ ಕೇಶವ ಬಂಗೇರ ಗೇರುಕಟ್ಟೆ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಗ್ರಾ.ಪಂ.ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟಕರಾಗಿ ಶ್ರೀಮತಿ ಜ್ಯೋತ್ಸಾ ಪಾಲೆಪ್ಪಾಡಿ, ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಕೆವಿ.ಜಿ.ಐಟಿಐ ಉಪಪ್ರಾಂಶುಪಾಲರಾದ ದಿನೇಶ್ ಮಡ್ತಿಲ ಭಾಗವಹಿಸಲಿದ್ದಾರೆ. ರಾತ್ರಿ 8:00 ಕ್ಕೆ ದೈವಗಳ ಭಂಡಾರ ತೆಗೆಯುವುದು, ನಂತರ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9:00 ರಿಂದ ಯಕ್ಷಗಾನ ಬಯಲಾಟ ” ಷಣ್ಮುಖ ವಿಜಯ” ನಡೆಯಲಿದೆ.


ಫೆ.26 ರಂದು ಬೆಳಿಗ್ಗೆ 5:00 ರಿಂದ ಶ್ರೀ ಉಳ್ಳಾಕ್ಲು ದೈವದ ನೇಮೋತ್ಸವ ನಂತರ ಅಡ್ಯಂತಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1:00 ರಿಂದ ಅನ್ನಸಂತರ್ಪಣೆ ನಡೆಯಲಿದೆ.ಫೆ.27 ರಂದು ರಾತ್ರಿ 7:30ಕ್ಕೆ ಪಂಜುರ್ಲಿ ದೈವದ ಭಂಡಾರ ತೆಗೆಯುವುದು, ರಾತ್ರಿ ಗಂಟೆ 8:30 ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 9:30 ರ ನಂತರ ಪಂಜುರ್ಲಿ ದೈವದ ನೇಮೋತ್ಸವ ಹಾಗೂ ಪ್ರಸಾದ ವಿತರಣೆ, ನಂತರ ಗುಳಿಗ ದೈವದ ನೇಮೋತ್ಸವ ನಡೆಯಲಿರುವುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading