Ad Widget

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭ, ಧ್ವಜಾರೋಹಣ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಇಂದು (ಫೆ.13) ಆರಂಭಗೊಂಡಿದ್ದು, ಫೆ.17ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜಾತ್ರೋತ್ಸವದ ಪ್ರಯುಕ್ತ ಇಂದು ದೇವಸ್ಥಾನದಲ್ಲಿ ಬೆಳಿಗ್ಗೆ ಉಗ್ರಾಣ ಮುಹೂರ್ತ, ಸಂಜೆ ತಂತ್ರಿಗಳ ಆಗಮನ, ಸ್ವಾಗತ, ಪ್ರಾರ್ಥನೆ, ದೀಪಾರಾಧನೆ ನಡೆಯಿತು. ರಾತ್ರಿ ಧ್ವಜಾರೋಹಣದ ಮೂಲಕ ವಿದ್ಯುಕ್ತವಾಗಿ ಜಾತ್ರೋತ್ಸವ ಆರಂಭಗೊಂಡಿತು.

. . . . . . . . .

ಬಯನ ಬಲಿ,ರಾತ್ರಿ ಪೂಜೆ,ನೃತ್ಯಬಲಿ ನಡೆಯಲಿದೆ. ಫೆ.14 ರಂದು ಬೆಳಿಗ್ಗೆ ಗಂಟೆ 7.00ಕ್ಕೆ ಗಣಪತಿ ಹವನ, ಉಷಾಃಪೂಜೆ, ಬೆಳಿಗ್ಗೆ 8.00ಕ್ಕೆ ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಶಿವೇಲಿ, ಅನ್ನಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 7.30ಕ್ಕೆ ಶಿವೇಲಿ, ದರ್ಶನ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಫೆ.15ರಂದು ಬೆಳಿಗ್ಗೆ ಗಂಟೆ 7.00ಕ್ಕೆ ಗಣಪತಿ ಹವನ, ಉಷಾಃಪೂಜೆ ನಡೆಯಲಿದೆ. 8.00ಕ್ಕೆ ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಶಿವೇಲಿ, ಅನ್ನಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂಟೆ 7.00ಕ್ಕೆ ರಾತ್ರಿ ಪೂಜೆ, 7.30ಕ್ಕೆ ನೃತ್ಯ ಬಲಿ ನಡೆಯಲಿದೆ. ಫೆ.16 ರಂದು ಬೆಳಿಗ್ಗೆ ಗಂಟೆ 7.00ಕ್ಕೆ ಗಣಪತಿ ಹವನ,ಉಷಾಃಪೂಜೆ, ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಶಿವೇಲಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.00 ಕ್ಕೆ ಶ್ರೀ ಭೂತಬಲಿ, ಸೇವೆಸುತ್ತು, ಪೇಟೆ ಸವಾರಿ, ಸಿಡಿಮದ್ದು ಪ್ರದರ್ಶನ ನಡೆಯಲಿದೆ. ರಾತ್ರಿ 9.00 ಕ್ಕೆ ರಾತ್ರಿ ಪೂಜೆ, ರಾತ್ರಿ ಗಂಟೆ 10.00ಕ್ಕೆ ಶಯನ, ಕವಾಟಬಂಧನ ನಡೆಯಲಿದೆ. ಫೆ.17 ರಂದು ಬೆಳಿಗ್ಗೆ ಗಂಟೆ 7.00ಕ್ಕೆ ಕವಾಟೋದ್ಘಾಟನೆ, ತೈಲಾಭ್ಯಂಜನ, ಉಷಾಃಪೂಜೆ, ಆರಾಟುಬಲಿ ನಂತರ ಅವಭೃತ ಸ್ನಾನ, ದರ್ಶನ ಬಲಿ ನಡೆಯಲಿದೆ. ಮಧ್ಯಾಹ್ನ 11.30ಕ್ಕೆ ರಾಜಾಂಗಣ ಪ್ರಸಾದ, ಬಟ್ಟಲುಕಾಣಿಕೆ, ಧ್ವಜ ಅವರೋಹಣ ,ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಪ್ರಸಾದ ನಡೆಯಲಿದೆ. ರಾತ್ರಿ 7.30ಕ್ಕೆ ಅಗ್ನಿಗುಳಿಗ ದೈವದ ಭಂಡಾರ ತೆಗೆಯುವುದು, ಭೂತಕೋಲ, ಬಟ್ಟಲುಕಾಣಿಕೆ ನಡೆಯಲಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading