ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಭಾರತ ಸೇವಾದಳ ಸುಳ್ಯ ತಾಲೂಕು ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಯಸ್ವಿನಿ ಪ್ರೌಢ ಶಾಲೆ ಜಾಲ್ಸೂರು ಇವರ ಸಂಯೋಜಕತ್ವದಲ್ಲಿ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಉದ್ಘಾಟನಾ ಸಮಾರಂಭ ನಡೆಯಿತು.
ಧ್ವಜಾರೋಹಣ ವನ್ನು ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ನೆರವೇರಿಸಿದರು.
ಸಭಾಕಾರ್ಯಕ್ರಮವನ್ನು ಜಾಲ್ಸೂರು ಗ್ರಾ.ಪಂ.ಅಧ್ಯಕ್ಷ ಬಾಬು.ಕೆ.ಎಂ ದೀಪಬೆಳಗಿಸಿ ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ನಿವೃತ್ತ ಪ್ರಿನ್ಸಿಪಾಲ್ ಹಾಗೂ ಸುಳ್ಯ ತಾಲೂಕು ಸೇವಾದಳದ ಅಧ್ಯಕ್ಷ ಪ್ರೊ.ಕೆ.ವಿ.ದಾಮೋದರ ಗೌಡ ವಹಿಸಿದರು.
ಮುಖ್ಯ ಅತಿಥಿಗಳಾಗಿ ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಜಯರಾಮ ರೈ, ಜಾಲ್ಸೂರು ಗ್ರಾ.ಪಂ.ಉಪಾಧ್ಯಕ್ಷೆ ಲೀಲಾವತಿ ಇ., ಸದಸ್ಯರಾದ ತಿರುಮಲೇಶ್ವರಿ ಡಿ., ಸಂದೀಪ್ ಕುಮಾರ್ ಪಿ.ಆರ್, ಸತೀಶ್ ಎನ್.ಎಂ, ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಭಾರತ ಸೇವಾದಳ ಸುಳ್ಯ ತಾಲೂಕು ಸಮಿತಿ ಉಪಾಧ್ಯಕ್ಷ ಡಾ.ಎಸ್.ರಂಗಯ್ಯ, ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಕತ್ತಾರ್ ಇಬ್ರಾಹಿಂ, ಖಜಾಂಜಿ ಶ್ರೀನಿವಾಸ ಭಟ್ ಡಿ. ಭಾಗವಹಿಸಿದರು.
ವೇದಿಕೆಯಲ್ಲಿ ಸುಳ್ಯ ತಾಲೂಕು ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ, ಪಯಸ್ವಿನಿ ಪ್ರೌಢಶಾಲಾ ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ, ಸುಳ್ಯ ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಯು.ಕೆ, ಶಿಕ್ಷಣ ಸಂಯೋಜಕರಾದ ನಳಿನಿ ಕಿರ್ಲಾಯ, ಸಂಧ್ಯಾ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಭಾಗವಹಿಸಿದರು. ಭಾರತ ಸೇವಾದಳದ ಸಂಘಟಕ ಟಿ.ಎಸ್.ಮಂಜೇಗೌಡ ಪ್ರಾಸ್ತಾವಿಕ ಮಾತನಾಡಿದರು.
ಪುರಮೆರವಣಿಗೆಯನ್ನು ಜಾಲ್ಸೂರು ಗ್ರಾ.ಪಂ.ಉಪಾಧ್ಯಕ್ಷೆ ಲೀಲಾವತಿ ಉದ್ಘಾಟಿಸಿದರು. ಬಳಿಕ ಜಾಲ್ಸೂರು ಪೇಟೆಯಲ್ಲಿ ಮೆರವಣಿಗೆ ನಡೆಯಿತು.
ಪಯಸ್ವಿನಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಶಾಖಾ ನಾಯಕ ಶಿವಪ್ರಸಾದ್ ಕೆ ಗೌರವ ಸಲಾಮ್ ನೆರವೇರಿಸಿ, ಕಾರ್ಯಕ್ರಮದ ನೇತೃತ್ವವನ್ನು ವಹಿಸಿದರು.
ಪಯಸ್ವಿನಿ ಪ್ರೌಢಶಾಲಾ ಶಿಕ್ಷಕರಾದ ಶಿವಪ್ರಕಾಶ್ ಸ್ವಾಗತಿಸಿ, ಮೀನಕುಮಾರಿ ವಂದಿಸಿದರು. ಶಿಕ್ಷಕಿ ಸವಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
- Monday
- February 3rd, 2025