ರೂ.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ತಾಲೂಕಿನ ಮಾವಿನಕಟ್ಟೆ – ಗುರುಪುರ – ಮಡಪ್ಪಾಡಿ ರಸ್ತೆ ಕಾಂಕ್ರೀಟೀಕರಣ ಹಾಗೂ ಗುರುಪುರ ಎಂಬಲ್ಲಿ ನಿರ್ಮಾಣವಾದ ಸರ್ಕಲ್ ಉದ್ಘಾಟನೆಯನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಗುತ್ತಿಗಾರು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿನಯ್ ಮುಳುಗಾಡು, ದೇವ ಬೂತಿನ ಅಧ್ಯಕ್ಷರಾದ ಯೋಗೀಶ್ ದೇವ, ಕಾರ್ಯದರ್ಶಿ ಪ್ರದೀಪ್ ಕುತ್ಯಾಳ, ಪಂಚಾಯತ್ ಸದಸ್ಯರಾದ ರಮೇಶ್ ಪಡ್ಪು, ಭವಾನಿ ಶಂಕರ ಮುಂಡೋಡಿ, ಯನ್ ಟಿ ಹೊನ್ನಪ್ಪ, ಜಯರಾಮ ಹಾಡಿಕಲ್ಲು, ಕರುಣಾಕರ ಪಾರೆಪ್ಪಾಡಿ, ದೇವ ಮತ್ತು ಮಾಡಪ್ಪಾಡಿ ಬೂತಿನ ಪಕ್ಷದ ಪ್ರಮುಖರು, ಬೂತಿನ ಕಾರ್ಯಕರ್ತರು ಹಾಗೂ ರಸ್ತೆಯ ಪಲಾನುಭವಿಗಳು ಈ ಸಂದರ್ಭ ದಲ್ಲಿ ಉಪಸ್ಥಿತರಿದ್ದರು, ಯೋಗೀಶ್ ದೇವ ಸ್ವಾಗತಿಸಿ, ಭವಾನಿಶಂಕರ ಮುಂಡೋಡಿ ಧನ್ಯವಾದ ತಿಳಿಸಿದರು,ವಿನಯ್ ಮುಳುಗಾಡು ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024