
ಕೇಂದ್ರ ಸರಕಾರ ಮಂಡಿಸಿದ 2023-24 ನೇ ಸಾಲಿನ ಚುನಾವಣಾ ವರ್ಷದಲ್ಲಿ ಬಜೆಟ್ ಕೊಡುಗೆ ನಿರೀಕ್ಷಿಸಿದ್ದ ರಾಜ್ಯದ ಜನರಿಗೆ ಇದು ಅಮೃತ ಕಾಲ ಅಲ್ಲಾ, ಇದು ವಿಷ ಗಳಿಗೆಯಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಚುನಾವಣಾ ವರ್ಷವಾದ ಕಾರಣ ಈ ಬಾರಿಯ ಬಜೆಟ್ನಲ್ಲಿ ರಾಜ್ಯಕ್ಕೆ ಉತ್ತಮ ಯೋಜನೆಗಳು ಬರುವ ನಿರೀಕ್ಷೆ ಇತ್ತು ಆದರೆಯಾವುದೇ ವಿಶೇಷ ಯೋಜನೆಗಳು ಇಲ್ಲ. 3.5 ಲಕ್ಷ ಕೋಟಿ ರೂ ಜಿಎಸ್ಟಿ ತೆರಿಗೆ ಪಾವತಿಸುವ ರಾಜ್ಯಕ್ಕೆ ಕೇಂದ್ರ ಬಜೆಟ್ನಲ್ಲಿ ಏನೂ ದೊರೆತಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಘೋಷಿಸಿದ್ದ ಸರಕಾರ ಗ್ರಾಮೀಣ ಜನರ ಉದ್ಯೋಗವನ್ನು ಕಡಿತ ಮಾಡಿದೆ. ಜನರಿಗೆ ಆಸರೆಯಾಗಿದ್ದ ನರೇಗಾದ ಅನುದಾನ 29 ಸಾವಿರ ಕಡಿತ ಮಾಡಿದ್ದಾರೆ. ಕೃಷಿ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ರಸಗೊಬ್ಬರ ಸಬ್ಸಿಡಿ ಕಳೆದ ವರ್ಷ ಇದ್ದ 2.25 ಲಕ್ಷ ಕೋಟಿಯಿಂದ 1.75 ಲಕ್ಷ ಕೋಟಿಗೆ ಇಳಿಸಲಾಗಿದೆ, ಆಹಾರ ಬೆಳೆ ಸಬ್ಸಿಡಿ ಕಡಿತ ಮಾಡಿದೆ. ಕೈಗಾರಿಕಾ ಪ್ರೋತ್ಸಾಹ ಧನ,ಆರೋಗ್ಯ ಕ್ಷೇತ್ರದ ಅನುದಾನ, ಗ್ರಾಮೀಣಾಭಿವೃದ್ಧಿ ಅನುದಾನ, ನಗರಾಭಿವೃದ್ಧಿ ಅನುದಾನ ಎಲ್ಲವೂ ಕಡಿತ ಮಾಡಿದೆ. ಹಣ ಬಾರದೆ ಸ್ಮಾರ್ಟ್ ಸಿಟಿ ಕೆಲಸಗಳು ಸ್ಥಗಿತವಾಗಿದೆ. ಆದಾಯ ತೆರಿಗೆ ಗೊಂದಲದಲ್ಲಿದೆ ಎಂದ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ಮಾತ್ರ 5300 ಕೋಟಿ ರೂ ಮೀಸಲಿರಿಸಿದೆ.ಮೇಕೆದಾಟು, ಮಹದಾಯಿ,ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಸ್ತಾವನೆಯೇ ಬಜೆಟ್ನಲ್ಲಿ ಇಲ್ಲಾ ಎಂದು ದೂರಿದರು. ಕೃಷಿಕರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡಿದೆ ಎಂದು ದೂರಿದರು,ಅಡಿಕೆ ಬೆಳೆಗಾರ ಸಮಸ್ಯೆಗೆ ಯಾವುದೇ ರೀತಿಯ ಉತ್ತರವನ್ನು ಕೊಡುತ್ತಿಲ್ಲ ಎಂದು ಹೇಳಿದರು.ತಜ್ಞರ ಅಭಿಪ್ರಾಯದಂತೆ ಅಡಿಕೆ ಬೆಳೆಗೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಚ ಸುಧೀರ್ ಕುಮಾರ್ ಶೆಟ್ಟಿ,ಕೆಪಿಸಿಸಿ ಸಂಯೋಜಕ, ಸುಳ್ಯ ಬ್ಲಾಕ್ ಉಸ್ತುವಾರಿ ಜಿ.ಕೃಷ್ಣಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಮುಖಂಡರಾದ ರಾಜೀವಿ ರೈ, ಎಂ.ವೆಂಕಪ್ಪ ಗೌಡ, ಕೆ. ಗೋಕುಲ್ದಾಸ್, ಪಿ.ಎಸ್.ಗಂಗಾಧರ, ಕೆ.ಪಿ.ಥಾಮಸ್, ಪಿ.ಪಿ.ವರ್ಗೀಸ್, ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ವಿಜಯಕುಮಾರ್ ಸೊರಕೆ, ಸರ್ವೋತ್ತಮ ಗೌಡ, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಸಿದ್ದಿಕ್ ಕೊಕ್ಕೊ, ಭವಾನಿಶಂಕರ ಕಲ್ಮಡ್ಕ, ಶಶಿಧರ ಎಂ.ಜೆ, ಕಳಂಜ ವಿಶ್ವನಾಥ ರೈ, ಶೀನಪ್ಪ ಗೌಡ, ನಂದರಾಜ ಸಂಕೇಶ, ಸತೀಶ್ ಕೆಡೆಂಜಿ, ನೀರಜ್ ಚಂದ್ರ ಪಾಲ್, ಅವಿನಾಶ್, ಸತ್ಯಕುಮಾರ್ ಆಡಂಜ, ಜಯಪ್ರಕಾಶ್ ನೆಕ್ರಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು