ಬಂಟ್ವಾಳ ಪುರಸಭೆಯ ಅಧ್ಯಕ್ಷರಾದ ಮಹಮ್ಮದ್ ಶರೀಫ್ ಹಾಗೂ ಬಂಟ್ವಾಳ ಪುರಸಭೆಯ ಸದಸ್ಯರಾದ ಸುಳ್ಯದ ಭಾರತ್ ಮೆಡಿಕಲ್ಸ್ ನಲ್ಲಿಕಾರ್ಯನಿರ್ವಹಿಸುತ್ತಿರುವ ಜಯರಾಮ್ ಎಂಬವರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಳ್ಯದಲ್ಲಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿ ದ ಮಹಮ್ಮದ್ ಶರೀಫ್ ರಿಯಾಜ್ ನೇತೃತ್ವದ ಟ್ರಸ್ಟ್ ನ ಸಮಾಜ ಸೇವೆ ಯುವಕರಿಗೆ ಅನುಕರಣೀಯ ಅವರ ಅರೋಗ್ಯ ಸೇವೆ, ನಿಗಮದ ಮನೆ ನಿರ್ಮಾಣ ಸಹಾಯಧನ ಸೌಲಭ್ಯವನ್ನು ತಲುಪಿಸಲು ಯಶಸ್ವಿ ಯಾಗಿದ್ದು ಫಲಾನುಭವಿಗಳು ಬಂಟ್ವಾಳ ದಲ್ಲಿಯೂ ಇದ್ದಾರೆ ಎಂಬುದು ಗಮನಾರ್ಹ ಎಂದರು ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಮುಸ್ತಫ,ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ನಗರ ಪಂಚಾಯತ್ ಸದಸ್ಯ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್,ಶರೀಫ್ ಕಂಠಿ ಹಾಗೂ ಎಂ ಜೆ ಎಂ ನಿರ್ದೇಶಕ ಇಬ್ರಾಹಿಂ ಶಿಲ್ಪಾ ಮೊದಲಾದವರು ಉಪಸಸ್ಥಿತರಿದ್ದರು.
- Wednesday
- December 4th, 2024