
ಗೂನಡ್ಕದ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಿ ರಾಮಚಂದ್ರ ಕಲ್ಲಗದ್ದೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರ ವತಿಯಿಂದ ರೂ 13,600 ಮೌಲ್ಯದ ಜೆರಾಕ್ಸ್ ಪ್ರಿಂಟರ್ ಮಿಷನ್ ಕೊಡುಗೆಯಾಗಿ ಶಾಲೆಗೆ ನೀಡಿದರು. ಹಾಗೂ ರೂ 3000 ಮೌಲ್ಯದ ಪೆನಲ್ ಬೋರ್ಡನ್ನು ಪೃಥ್ವಿ ರಂಜನ್ ಕಲ್ಲಗದ್ದೆಯವರು ಶಾಲಾ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ ಜಿ ಇವರಿಗೆ ಹಸ್ತಾಂತರಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಹಾಜಿ ಅಬ್ದುಲ್ಲ ಪಿ ಎ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಆಶಾ ವಿನಯ್, ಸದಸ್ಯರುಗಳು, ಪೋಷಕರು ಊರಿನ ವಿದ್ಯಾ ಅಭಿಮಾನಿಗಳು, ವಿದ್ಯಾರ್ಥಿಗಳು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ನಿವೃತ್ತ ಮುಖ್ಯೋಪಾಧ್ಯಾಯರಾದ ಯು ಎಸ್ ಚಿದಾನಂದ ಮಾಸ್ತರ್ ಗಣರಾಜ್ಯೋತ್ಸವದ ಮಹತ್ವ ಕುರಿತು ಮಾಹಿತಿಯನ್ನು ನೀಡಿದರು. ಮುಖ್ಯೋಪಾಧ್ಯಾಯರಾದ ಹನುಮಂತ ಜಿ. ಸ್ವಾಗತಿಸಿ, ಶಿಕ್ಷಕಿಯಾದ ಭವಿತ ಕೆ ಪಿ ವಂದಿಸಿದರು.