ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ. 01 ಮತ್ತು ಫೆ. 2 ರಂದು ವರ್ಷಪ್ರತಿಯಂತೆ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವವು ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ ತಿಳಿಸಿದ್ದಾರೆ.
ಜ. 25 ರಂದು ಗೊನೆ ಮುಹೂರ್ತ ನೆರವೇರಿದ್ದು, ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ, ಅರ್ಚಕರಾದ ಮಹಾಬಲೇಶ್ವರ ಭಟ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಹೊಸೊಳಿಕೆ, ವೆಂಕಟ್ ವಳಲಂಬೆ, ಡಿ.ಎಂ.ರಾಮಣ್ಣ ಗೌಡ, ಪದ್ಮನಾಭ ದಂಬೆಕೋಡಿ, ಕರಿಯಪ್ಪ ನಾಯ್ಕ್ ಕಾಜಿಮಡ್ಕ, ಕಿಶೋರ್ ಕುಮಾರ್ ಪೈಕ, ಹರಿಶ್ಚಂದ್ರ ಕೇಪಳಕಜೆ ಉಪಸ್ಥಿತರಿದ್ದರು.
ಫೆ 01 ರಂದು ಬುಧವಾರ ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ ಗಂಟೆ 9-00ಕ್ಕೆ ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ಗಂಟೆ 12-00ಕ್ಕೆ ನವ ಕಲಾಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ರಿಂದ ದೈವಗಳ ಭಂಡಾರ ತೆಗೆಯುವುದು, ಚೆಂಡೆವಾದನ, ರಾತ್ರಿ 7.30 ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 8.00 ಕ್ಕೆ ದೇವರ ಉತ್ಸವ ಬಲಿ ಹೊರಡುವುದು, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.
ಫೆ.2 ರಂದು ಗುರುವಾರ ಬೆಳಗ್ಗಿನ ಜಾವ 5-00ಕ್ಕೆ ಉಳ್ಳಾಕ್ಲು – ಉಳ್ಳಾಲ್ತಿ ನೇಮ, ಬೆಳಿಗ್ಗೆ ಗಂಟೆ 7-00ಕ್ಕೆ ಕುಮಾರ ದೈವದ ನೇಮ, ಬೆಳಿಗ್ಗೆ ಗಂಟೆ 8-00ಕ್ಕೆ ಶ್ರೀ ದೇವರಿಗೆ ಪೂಜೆ, ಬೆಳಿಗ್ಗೆ ಗಂಟೆ 8-30ಕ್ಕೆ ರಕ್ತೇಶ್ವರಿ ದೈವದ ನೇಮ, ಬೆಳಿಗ್ಗೆ ಗಂಟೆ 9-30ಕ್ಕೆ ಧೂಮಾವತಿ ದೈವದ ನೇಮ, ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 12-30ಕ್ಕೆ ದೈವಗಳ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಸಂಜೆ ಗಂಟೆ 5.00ಕ್ಕೆ ಗುಳಿಗ ಕೋಲ, ಪ್ರಸಾದ ವಿತರಣೆ ನಡೆಯಲಿದೆ.