ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸುಳ್ಯ ತಾಲೂಕಿನ ವಾರ್ಷಿಕ ಮಹಾಸಭೆಯು ಜನಜಾಗೃತಿ ವೇದಿಕೆಯ ಅಧ್ಯಕ್ಷ ವಿಶ್ವನಾಥ ರೈ ಕಳಂಜ ಅವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜ.23 ರಂದು ನಡೆಯಿತು. ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಲೋಕನಾಥ್ ಅಮೆಚೂರು ಅವರನ್ನು ಆಯ್ಕೆ
ಮಾಡಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್.ಎ.ರಾಮಚಂದ್ರ, ವಿ.ಹೆಚ್.ಪಿ. ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ್ ಪೈಕ, ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯ , ನಿಕಟ ಪೂರ್ವಧ್ಯಕ್ಷ ಭವಾನಿ ಶಂಕರ ಅಡ್ತಲೆ, ವಿಮಲಾ ರಂಗಯ್ಯ, ಮಹೇಶ್ ರೈ ಮೇನಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನವಜೀವನ ಸಮಾವೇಶದ ಲೆಕ್ಕಪತ್ರವನ್ನು ಯೋಜನಾಧಿಕಾರಿ ನಾಗೇಶ್ ಪಿ ಮಂಡಿಸಿದರು. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ, ಮದ್ಯವರ್ಜನಾ ಶಿಬಿರ ಈಗಾಗಲೇ ನಡೆಸಿದ್ದು ಮುಂದೆಯೂ ಆಯೋಜನೆ ಮಾಡುವುದಾಗಿ ನಿರ್ಣಯಿಸಲಾಯಿತು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ನೂತನ ಅಧ್ಯಕ್ಷರ ಆಯ್ಕೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ತಾಲೂಕಿನ 10 ವಲಯಗಳ ವಲಯಾಧ್ಯಕ್ಷರು,ತಾಲೂಕು ವಲಯ ಮೇಲ್ವಿಚಾರಕರು, ಜನಜಾಗೃತಿ ವೇದಿಕೆಯ ಸದಸ್ಯರು ಭಾಗವಹಿಸಿದರು. ವಲಯ ಮೇಲ್ವಿಚಾರಕ ಬಾಲಕೃಷ್ಣ ಸ್ವಾಗತಿಸಿ, ವಂದಿಸಿದರು. ಸಂಪಾಜೆ ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.