ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.02 ರಂದು ಶ್ರೀ ಕೊರತಿಯಮ್ಮ ದೈವದ 8ನೇ ವರ್ಷದ ನೇಮೋತ್ಸವ ಹಾಗೂ ಮಾ.03 ರಿಂದ 04 ರವರೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ 54ನೇ ವರ್ಷದ ಒತ್ತೆಕೋಲವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಮಾ.02 ರಂದು ಬೆಳಿಗ್ಗೆ 9:30ಕ್ಕೆ ಗಣಪತಿ ಹೋಮ, ರಾತ್ರಿ 7:30 ರಿಂದ ಶ್ರೀ ಕೊರತಿಯಮ್ಮ ದೈವದ ನಡಾವಳಿ ಹಾಗೂ ರಾತ್ರಿ 9:30 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಮಾ.03 ರಂದು ಸಂಜೆ 5:00 ಗಂಟೆಗೆ ಭಂಡಾರ ಹೊರಡುವುದು, ರಾತ್ರಿ 6:30 ರಿಂದ 8:00 ರವರೆಗೆ ಕುಲ್ಕುಂದ ಪರಿಸರದ ಪುಟಾಣಿಗಳಿಂದ “ನೃತ್ಯ ವೈವಿಧ್ಯ”, ಸಂಜೆ 7:00 ಗಂಟೆಗೆ ಮೇಲೇರಿಗೆ ಅಗ್ನಿ ಸ್ಪರ್ಶ, ರಾತ್ರಿ 8:00 ರಿಂದ 10:30 ರವರೆಗೆ “ಶೃಂಗೇರಿ ಫ್ರೆಂಡ್ಸ್ ಕುಲ್ಕುಂದ ಕಾಲನಿ” ಇವರ ಪ್ರಾಯೋಜಕತ್ವದಲ್ಲಿ ಸತತ ನಾಲ್ಕನೇ ಬಾರಿಗೆ “ಉಮೇಶ್ ಮಿಜಾರ್ ತಂಡದ ತೆಲಿಕೆದ ಗೊಂಚಿಲ್” ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8:30 ರಿಂದ ಅನ್ನಸಂತರ್ಪಣೆ ಹಾಗೂ ರಾತ್ರಿ 10:30 ರಿಂದ ಶ್ರೀ ಆಧಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ನಂದನಬಿತ್ತಲ್ ಇವರು ಗಾನ ಮಂದಾರ ಶ್ರೀ ಗಿರೀಶ್ ರೈ ಕಕ್ಯಪದವು ಭಾಗವತಿಕೆಯಲ್ಲಿ ಯಕ್ಷಬೊಳ್ಳಿ ಕಡಬ ಶ್ರೀ ದಿನೇಶ್ ರೈ ಅಭಿನಯದಲ್ಲಿ “ಬ್ರಹ್ಮಕಲಶ” ಎಂಬ ತುಳು ಪ್ರಸಂಗ ನಡೆಯಲಿದೆ. ನಂತರ ರಾತ್ರಿ 12:00 ರಿಂದ ಕುಲ್ಚಾಟ ದೈವದ ನಡಾವಳಿ ನಡೆಯಲಿದೆ.
ಮಾ.04 ರಂದು ಪ್ರಾತಃಕಾಲ 4:30ಕ್ಕೆ ಕಳಸಾಟ, ಪ್ರಾತಃಕಾಲ 5:00 ರಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಬೆಳಿಗ್ಗೆ 7:00 ಗಂಟೆಗೆ ಮಾರಿಕಳ ಹಾಗೂ ಗಂಧ ಪ್ರಸಾದ ವಿತರಣೆ, ಬೆಳಿಗ್ಗೆ 8:00 ರಿಂದ ಗುಳಿಗ ದೈವದ ನಡಾವಳಿ ನಡೆಯಲಿದೆ.
(ವರದಿ : ಉಲ್ಲಾಸ್ ಕಜ್ಜೋಡಿ)
- Friday
- November 1st, 2024