ಬಡ ವ್ಯಾಪಾರಸ್ಥರು ಜಾತ್ರೆಗಳಲ್ಲಿ ಇತರ ಸಮಾರಂಭಗಳಲ್ಲಿ ವ್ಯಾಪಾರ ಮಾಡುವುದು, ಪಾರಂಪರಿಕ ನಡೆಸಿಕೊಂಡು ಬಂದ ಎಲ್ಲಾ ಧರ್ಮದ ಅನುಯಾಯಿಗಳು ಇದರಿಂದಲೇ ತನ್ನ ಜೀವನೋಪಾಯವನ್ನು ನಡೆಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಕುಟುಂಬ, ಸಂಸಾರದ ಹೊರೆ ಎಲ್ಲವೂ ಇದನ್ನೇ ನಂಬಿ ಬೇರೆ ವ್ಯಾಪಾರದ ದಾರಿಯನ್ನು ಹಿಡಿಯದೆ ರಾತ್ರಿ, ಹಗಲು ನಿದ್ದೆಗೆಟ್ಟು.ಕೇವಲ ಜಾತ್ರೆ ವ್ಯಾಪಾರದಿಂದಲೇ ಜೀವನ ನಡೆಸುವ ಎಲ್ಲಾ ವರ್ಗದವರು. ಪ್ರತೀ ಕಾರ್ಯಕ್ರಮದಲ್ಲಿ ಜನ ಸಮೂಹಕ್ಕೆ ಆಕರ್ಷಣೆ ಹಾಗೂ ಕಾರ್ಯಕ್ರಮದ ಯಶಸ್ವಿಯ ರೂವಾರಿಗಳು ಎಂದರೆ ತಪ್ಪಾಗಲಾರದು. ಇಂಥ ಸಂದರ್ಭದಲ್ಲಿ ಜಾತಿ ಹೆಸರಿನಲ್ಲಿ ಬೇರ್ಪಡಿಸಿ ಬಡವರ ಹೊಟ್ಟೆಪಾಡಿಗೆ ಮೋಸಮಾಡುವ ಇಂಥ ಬುದ್ದಿಹೀನರು ಮಾಡುತ್ತಿರುವುದು ದೇವರು ಕ್ಷಮಿಸಲಾರದ ಅಪರಾಧ. ಮುಸ್ಲಿಂ ಉರೂಸ್ ಇತರ ಸಮಾರಂಭಗಳಲ್ಲಿ ಸರ್ವಧರ್ಮಿಯರು ಎಲ್ಲಿ ಬೇಕಾದರೂ ವ್ಯಾಪಾರ ಮಾಡಿ ನಿಮ್ಮನ್ನು ಆತ್ಮೀಯವಾಗಿ ಮುಸ್ಲಿಂ ಸಮಾಜ ಬರಮಾಡಿಕೊಳ್ಳುತ್ತದೆ ಮತ್ತು ನಿಮ್ಮನ್ನು ಗೌರವಿತವಾಗಿ ನಡೆಸಿಕೊಳ್ಳುತ್ತೇವೆ ಎಂದು ದ.ಕ.ಜಿಲ್ಲಾ ಮದ್ರಸಾ ಮ್ಯಾನೇಜ್ ಮೆಂಟ್ ಅಸೋಶಿಯೇಶನ್ ಕಾರ್ಯದರ್ಶಿ ಅಬುಬಕ್ಕರ್ ಮುಲಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Friday
- November 1st, 2024