ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ, ಸಮೂಹ ಸಂಪನ್ಮೂಲ ಕೇಂದ್ರ ದೇವಚಳ್ಳ ಹಾಗೂ ಸರಕಾರಿ ಪ್ರೌಢಶಾಲೆ ಎಲಿಮಲೆ ಇವುಗಳ ಸಹಭಾಗಿತ್ವದಲ್ಲಿ ದೇವಚಳ್ಳ ಕ್ಲಸ್ಟರ್ ನ 2022-23ನೇ ಸಾಲಿನ ಕಲಿಕಾ ಹಬ್ಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಜ.19 ರಂದು ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ನಡೆಯಿತು.
ಜ.19 ಮತ್ತು 20 ರಂದು ಎರಡು ದಿನಗಳ ಕಾಲ ನಡೆಯುವ ಈ ಕಲಿಕಾ ಹಬ್ಬದಲ್ಲಿ ದೇವಚಳ್ಳ ಕ್ಲಸ್ಟರ್ ನ 16 ಸರಕಾರಿ ಪ್ರಾಥಮಿಕ ಹಾಗೂ 1 ಪ್ರೌಢಶಾಲೆಯ 120 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದಾರೆ.
ಕಲಿಕಾ ಚೇತರಿಕೆ ವರ್ಷದಲ್ಲಿ ಕಲಿಕೆಯನ್ನು ಸಂತಸದಾಯಕಗೊಳಿಸುವುದರೊಂದಿಗೆ ವಿದ್ಯಾರ್ಥಿಗಳನ್ನು ವಿಜ್ಞಾನ, ಕಲೆ, ಹಾಡು, ಕ್ರಾಫ್ಟ್, ಪರಿಸರ ಅನ್ವೇಷಣೆ, ಸಂದರ್ಶನ ಮುಂತಾದ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಕಲಿಕಾ ಹಬ್ಬ ಕಾರ್ಯಕ್ರಮವು ಪ್ರಯೋಜನಕಾರಿಯಾಗಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿನ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಜಯಂತ ಹರ್ಲಡ್ಕ ಇವರು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು ಇವರು ನೆರವೇರಿಸಿದರು.
ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಸಂಧ್ಯಾ ಕುಮಾರಿ ಇವರು ಸ್ವಾಗತಿಸಿದರು. ದೇವಚಳ್ಳ ಕ್ಲಸ್ಟರ್ ಸಿ.ಆರ್.ಪಿ ಸಂತೋಷ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಧರ ಗೌಡ.ಕೆ, ಉಪಾಧ್ಯಕ್ಷರಾದ ಕುಶಾಲಪ್ಪ.ಪಿ ಇವರುಗಳು ಉಪಸ್ಥಿತರಿದ್ದರು.
ಸಂಪನ್ಮೂಲ ಶಿಕ್ಷಕರಾದ ಶಿವಕುಮಾರ್ ಇವರು ಧನ್ಯವಾದ ಸಮರ್ಪಿಸಿದರು, ಸರಕಾರಿ ಪ್ರೌಢಶಾಲೆ ಎಲಿಮಲೆ ಶಿಕ್ಷಕರಾದ ಮುರಳೀಧರ.ಪಿ.ಜೆ ಇವರು ಕಾರ್ಯಕ್ರಮ ನಿರೂಪಿಸಿದರು.
ಕ್ಲಸ್ಟರ್ ನ 10 ಮಂದಿ ಸಂಪನ್ಮೂಲ ಶಿಕ್ಷಕರು 4 ಕಾರ್ನರ್ ಗಳಲ್ಲಿ ಜ.19 ಮತ್ತು 20 ಎರಡು ದಿನಗಳ ಕಾಲ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಚಟುವಟಿಕೆ ನಿರ್ವಹಣೆ ಮಾಡಲಿದ್ದಾರೆ.
(ವರದಿ : ಉಲ್ಲಾಸ್ ಕಜ್ಜೋಡಿ)
- Sunday
- November 24th, 2024