ಸುಳ್ಯ ತಾಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಿ ಅಧಿಕೃತವಾಗಿ ಮರಳುಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ಸುಳ್ಯ ತಾಲೂಕು ಪಂಚಾಯತ್ ಎದುರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರತಿಭಟನೆ ಎರಡನೇಯ ದಿನಕ್ಕೆ ಕಾಲಿರಿಸಿದೆ.
ಜ.17 ರಂದು ಸುಳ್ಯದ ಪರಿವಾರಕಾನ ನಿವಾಸಿ ಅನಿಲ್ ಕುಮಾರ್ ರವರ ನೇತೃತ್ವದಲ್ಲಿ ಪ್ರಾರಂಭಗೊಂಡ ಪ್ರತಿಭಟನೆಯು ಏಕಾಂಗಿ ಹೋರಾಟದ ಮೂಲಕ ಒಂದು ದಿನ ಪೂರೈಸಿ ಇದೀಗ ಎರಡನೇ ದಿನದಂದು ಅನಿಲ್ ಕುಮಾರ್ ರವರ ಪ್ರತಿಭಟನೆಗೆ ಬೆಂಬಲವಾಗಿ ಹಲವಾರು ಮಂದಿ ಕೈ ಜೋಡಿಸಿದ್ದು ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಮೌನ ಪ್ರತಿಭಟನೆಯನ್ನು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದೇವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಿದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ಪ್ರತಿಭಟನೆ ಮುಂದುವರಿಸಬೇಕೆಂದು ನಮ್ಮ ಮರಳುಗಾರಿಕೆ ತಾಲೂಕು ಸಂಘದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪ್ರತಿಭಟನಾನಿರತ ಅನಿಲ್ ಕುಮಾರ್ ಮಾಧ್ಯಮದ ಮುಂದೆ ತಿಳಿಸಿದರು.
ಪ್ರತಿಭಟನೆ ಯಲ್ಲಿ ಸುನಿಲ್ ಕುಮಾರ್ ಕೆ.ಸಿ, ಜಯರಾಮ ಭಾರದ್ವಾಜ್, ರಿಫಾಯಿ ಪೈಚಾರು, ಗುರುದೀಕ್ಷಿತ್ ನಾವೂರು, ಜಯಂತ ಗೌಡ ಅಡ್ಯಾರ್, ಅಜಿತ್ ಪೇರಾಲ್ ಭಾಗವಹಿಸಿದರು.