ಪುತ್ತೂರು ತಾಲೂಕಿನ ಮುಂಡೂರಿನಲ್ಲಿ ಯುವತಿಯನ್ನು ಮನೆಯ ಅಂಗಳದಲ್ಲೇ ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕನಕಮಜಲಿನ ಅಂಗಾರ ಎಂಬವರ ಪುತ್ರ ಉಮೇಶ್ ಎಂದು ಗುರುತಿಸಲಾಗಿದೆ
ಉಮೇಶ್ ಜಯಶ್ರೀಯನ್ನು ಪ್ರೀತಿಸುತ್ತಿದ್ದು, ಬಿ.ಎಸ್.ಸಿ ಪದವೀಧರೆಯಾದ ಜಯಶ್ರೀ ಇತ್ತೀಚೆಗೆ ಅವನ ಗುಣ ನಡತೆ ಇಷ್ಟವಾಗದ ಕಾರಣ 2022ರ ನವೆಂಬರ್ ವೇಳೆಗೆ ಉಮೇಶನನ್ನು ದೂರ ಮಾಡಿದ್ದು, ಈ ಹಿನ್ನೆಲೆ ಕೋಪಗೊಂಡ ಉಮೇಶ್ ಆಕೆಯನ್ನು ಹತ್ಯೆ ಮಾಡಿದ್ದಾಗಿ ತನಿಖೆ ವೇಳೆ ತಿಳಿದು ಬಂದಿದೆ. ಜಯಶ್ರೀ ತಾಯಿ ಕೂಡ ಆತನೇ ಹತ್ಯೆ ಮಾಡಿರಬಹುದು ಎಂದು ಆರೋಪಿಸಿ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತಾಯಿ ನೀಡಿದ ದೂರಿನ ಅನ್ವಯ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
- Sunday
- November 24th, 2024