Ad Widget

ರಂಗಮನೆಯಲ್ಲಿ ನಾಟಕೋತ್ಸವ ಆರಂಭ – ಸಚಿವರಾದ ಎಸ್.ಅಂಗಾರ ಚಾಲನೆ

. . . . .

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರ ಆಶ್ರಯದಲ್ಲಿ 3 ದಿನಗಳ ನಾಟಕೋತ್ಸವಕ್ಕೆ ಬಂದರು, ಮಿನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ, ಜೀವನ್ ರಾಮ್ ಸುಳ್ಯ, ಕೆ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಜ.13 ರಂದು ಯಕ್ಷ ರಂಗಾಯಣ ಕಾರ್ಕಳ ಇಲ್ಲಿನ ಸಂಚಾರಿ ರಂಗ ತಂಡ ಅಭಿನಯಿಸುವ, ಶಶಿರಾಜ್ ರಾವ್ ಕಾವೂರು ವಿರಚಿತ, ಜೀವನ್ ರಾಂ ಸುಳ್ಯ ನಿರ್ದೇಶನದ ‘ಪರಶುರಾಮ’ ನಾಟಕ ಪ್ರದರ್ಶನಗೊಂಡಿತು.

ಜ.14 ರಂದು ನೀನಾಸಂ ತಿರುಗಾಟದ ಕಲಾವಿದರು ಅಭಿನಯಿಸುವ, ಮೂಲ: ಯೂರಿಪಿಡೀಸ್ ಹಾಗೂ ಬಿ.ಆರ್.ವೆಂಕಟರಮಣ ಐತಾಳ ನಿರ್ದೇಶಿಸಿದ ‘ಇಫಿಜೀನಿಯಾ’ ಹಾಗೂ ಜ.15 ರಂದು ರವೀಂದ್ರನಾಥ ಠಾಗೋರ್ ವಿರಚಿತ, ಪ್ರವೀಣ್ ಎಡಮಂಗಲ ನಿರ್ದೇಶಿಸಿದ ‘ಮುಕ್ತಾಧಾರ’ ನಾಟಕ ಪ್ರದರ್ಶನಗೊಳ್ಳಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!