ಈ ಹಿಂದಿನ ಸರಕಾರಗಳು ಘೋಷಣೆ ಮಾಡಿದ ರೈತರ ಸಾಲಗಳನ್ನು ಮನ್ನಾ ಯೋಜನೆ ಕೆಲವರಿಗೆ ಸಿಕ್ಕಿದ್ದರೇ ಇನ್ನೂ ಕೆಲವರಿಗೆ ಸಿಕ್ಕಿರಲಿಲ್ಲ. ತಾಂತ್ರಿಕ ಕಾರಣಕ್ಕೆ ರಾಜ್ಯದಲ್ಲಿ ಹಲವು ರೈತರು ಈ ಸಾಲಮನ್ನಾ ಯೋಜನೆಯಿಂದ ವಂಚಿತರಾಗಿದ್ದರು. ಮತ್ತು ಕಳೆದ ನಾಲ್ಕು ವರಷಗಳಿಂದ ಸಾಲ ಮನ್ನಾ ಹಣ ಖಾತೆಗೆ ಜಮಾವಣೆಯಾಗುವ ನಿರೀಕ್ಷೆಯಲ್ಲಿದ್ದರು. ಇನ್ನೂ ಬಾರದ ಹಿನ್ನಲೆಯಲ್ಲಿ ಇದೀಗ ರೈತರು ರೋಸಿ ಹೋಗಿದ್ದಾರೆ.
2018 ನೇ ಸಾಲಿನಲ್ಲಿ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದ ಬೆಳೆ ಸಾಲದ ಪೈಕಿ ರೂಪಾಯಿ ಒಂದು ಲಕ್ಷ ಸಾಲಮನ್ನಾ ಯೋಜನೆಯನ್ನು ಘೋಷಿಸಿ ಹಲವು ವರ್ಷ ಕಳೆದರೂ ಇನ್ನೂ ಹಲವು ರೈತರಿಗೆ ಈ ಸೌಲಭ್ಯ ಸಿಗದೇ ಇರುವುದರಿಂದ ಸುಳ್ಯ ಭಾಗದ ಹಲವು ರೈತರು ಸಂಘಟನೆ ಮಾಡಿ ಕಾನೂನು ಹೋರಾಟ ನಡೆಸಲು ಸಿದ್ದತೆ ನಡೆಸಿದ್ದಾರೆ. ಈ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲು ಮುಂದಿನ ಕಾನೂನಾತ್ಮಕ ಹೋರಾಟದ ಭಾಗವಾಗಿ ಸಮಾಲೋಚನಾ ಸಭೆ ನಡೆಸಲು ಸುಳ್ಯದ ಎಪಿಎಂಸಿಯಲ್ಲಿ ಜ.17 ರಂದು ಸಾಲಮನ್ನಾ ವಂಚಿತ ರೈತರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೋರಾಟ ಸಮಿತಿಯ ಸಂಚಾಲಕ ಉಮಾಶಂಕರ್ ಅಡ್ಯಡ್ಕ ತಿಳಿಸಿದ್ದಾರೆ.
- Friday
- November 1st, 2024