
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ) ಸುಳ್ಯ ಇದರ ಆಶ್ರಯದಲ್ಲಿ ಜ. 13,14,15 ರಂದು ಪ್ರತಿದಿನ ಸಂಜೆ 6.30ಕ್ಕೆ ಯಕ್ಷ ರಂಗಾಯಣ ಮತ್ತು ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಜ. 13 ರಂದು ಯಕ್ಷ ರಂಗಾಯಣ ಕಾರ್ಕಳ ಇಲ್ಲಿನ ಸಂಚಾರಿ ರಂಗ ತಂಡ ಅಭಿನಯಿಸುವ, ಶಶಿರಾಜ್ ರಾವ್ ಕಾವೂರು ವಿರಚಿತ, ಜೀವನ್ ರಾಂ ಸುಳ್ಯ ನಿರ್ದೇಶನದ ಪರಶುರಾಮ ನಾಟಕ ಪ್ರದರ್ಶನ
ಜ.14ರಂದು ನೀನಾಸಂ ತಿರುಗಾಟದ ಕಲಾವಿದರು ಅಭಿನಯಿಸುವ, ಮೂಲಃ ಯೂರಿಪಿಡೀಸ್ ಹಾಗೂ ಬಿ.ಆರ್. ವೆಂಕಟರಮಣ ಐತಾಳ ನಿರ್ದೇಶಿಸಿದ ಇಫಿಜೀನಿಯಾ ಹಾಗೂ ಜ. 15ರಂದು ರವೀಂದ್ರನಾಥ ಠಾಗೋರ್ ವಿರಚಿತ, ಪ್ರವೀಣ್ ಎಡಮಂಗಲ ನಿರ್ದೇಶಿಸಿದ ‘ ಮುಕ್ತಾಧಾರ ‘ ನಾಟಕಗಳು ಪ್ರದರ್ಶನಗೊಳ್ಳಲಿದೆ. ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ನಾಟಕೋತ್ಸಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆಯ ಅಧ್ಯಕ್ಷ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.