
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಮರ ಪಡ್ನೂರು ಕಾರ್ಯಕ್ಷೇತ್ರದ ಮಂಜುಶ್ರೀ ಸ್ವಸಹಾಯ ಸಂಘದ ಶ್ರೀಮತಿ ರಾಜೀವಿ ಇವರು ಆಟೋರಿಕ್ಷಾ ಖರೀದಿಗಾಗಿ ಪ್ರಗತಿನಿಧಿ ಸಾಲ ಪಡೆದುಕೊಂಡು ಆಟೋರಿಕ್ಷಾ ಖರೀದಿ ಮಾಡಿದ್ದು, ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ ಬಾಲಕೃಷ್ಣ ಗೌಡ ಬೊಳ್ಳೂರು ಆಟೋರಿಕ್ಷಾದ ಕೀ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವೀಣಾ ಪಡ್ಪು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೊಡ್ಡತೋಟ ವಲಯ ಮೇಲ್ವಿಚಾರಕರಾದ ಸೀತಾರಾಮ್ ಕಾನಾವು ಹಾಗೂ ಸೇವಾಪ್ರತಿನಿಧಿ ಹರ್ಷಿತಾ ಕಳಂಜ, ಸೇವಾಪ್ರತಿನಿಧಿ ಚಂದ್ರಪ್ರಕಾಶ್ ಉಪಸ್ಥಿತರಿದ್ದರು.
(ವರದಿ : ಉಲ್ಲಾಸ್ ಕಜ್ಜೋಡಿ)