ಮೊಗ್ರದಲ್ಲಿ ಸುಮಾರು 1.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸೇತುವೆಗೆ ಸುಳ್ಯ ಶಾಸಕ ಹಾಗೂ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರರವರು ಜ. 11 ರಂದು ಗುದ್ದಲಿ ಪೂಜೆ ನೆರೆವೇರಿಸಿದರು. ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವ ಎಸ್ ಅಂಗಾರರವರು, “ಮೊಗ್ರ ಜಾತ್ರೆ ಮುಗಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು” ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಕೇಂದ್ರ ರಬ್ಬರ್ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್, ಮೊಗ್ರ ಬೂತ್ ಸಮಿತಿ ಜಂಟಿ ಕಾರ್ಯದರ್ಶಿ ನಿತ್ಯಾನಂದ ಕಾಂತಿಲ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಧಾಕೃಷ್ಣ ತುಪ್ಪದ ಮನೆ, ಎಪಿಎಂಸಿ ಮಾಜಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷೆ ರೇವತಿ ಆಚಳ್ಳಿ, ಮೊಗ್ರ ವಾರ್ಡ್ ಸದಸ್ಯರುಗಳಾದ ಶ್ರೀಮತಿ ಶಾರದಾ ಎನ್. ಕೆ., ವಸಂತ ಮೊಗ್ರ, ಬಿಜೆಪಿ ಮೊಗ್ರ ವಾರ್ಡ್ ಸಮಿತಿ ಅಧ್ಯಕ್ಷ ಕೇಶವ ಕಾಂತಿಲ, ಕಾರ್ಯದರ್ಶಿ ಜಗದೀಶ್ ಚಿಕ್ಮುಳಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಬಾಲಕೃಷ್ಣ ಚಿಕ್ಮುಳಿ, ಪ್ರೇಮಲತಾ ಚಿಕ್ಮುಳಿ, ರಾಕೇಶ್ ಮೆಟ್ಟಿನಡ್ಕ, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಆಡಳಿತ ಮೊಕ್ತೆಸರಾದ ದೊಡ್ಡಣ್ಣ ಗೌಡ ಚಿಕ್ಮುಳಿ, ಗ್ರಾ.ಪಂ.ಮಾಜಿ ಸದಸ್ಯ ಜಯಪ್ರಕಾಶ್ ಮೊಗ್ರ, ಉಮೇಶ್ ಮಕ್ಕಿ, ಚೆನ್ನಕೇಶವ ಕಮಿಲ, ನ್ಯಾಯವಾದಿ ಪುರುಷೋತ್ತಮ ಮಲ್ಕಜೆ, ಸುಧಾಕರ ಮಲ್ಕಜೆ, ಗಂಗಾಧರ್ ಭಟ್, ಸತ್ಯನಾರಾಯಣ ಮೊಗ್ರ, ಸೂರಪ್ಪ ಕಮಿಲ,
ಸುರೇಶ ಕೆಂಬ್ರೋಳಿ, ಸದಾನಂದ ಮಲ್ಕಜೆ, ನಿತ್ಯಾನಂದ ಕಾಂತಿಲ, ಮೊಗ್ರ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ದಿವ್ಯ, ಗಂಗಾಧರ ಚಿಕ್ಮುಳಿ, ಸೀತಾರಾಮ ಚಿಕ್ಮುಳಿ,
ರಾಮಕೃಷ್ಣ ಚಿಕ್ಮುಳಿ ಮತ್ತಿತರರು ಉಪಸ್ಥಿತರಿದ್ದರು.
- Thursday
- November 21st, 2024