ಸುಳ್ಯ ಜಾತ್ರೋತ್ಸವ ಕಾರ್ಯಕ್ರಮ ವೈಭವದಿಂದ ನಡೆಯಿತ್ತಿದ್ದು ಇಂದು ರಾತ್ರಿ ರಥೋತ್ಸವ ನಡೆಯಲಿದೆ.
ಸೋಮವಾರ ಸಣ್ಣ ದರ್ಶನ ಬಲಿ, ನಡುಬೆಳಗು, ಬಟ್ಟಲು ಕಾಣಿಕೆ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ ವಿವೇಕಾನಂದ ವೃತ್ತ, ಹಳೆಗೇಟು
ಹೊಸಗದ್ದೆ ಹಳೆಗೇಟು ಕಟ್ಟೆ, ಅಮೃತಭವನ ರಾಮಮಂದಿರ ಜಟ್ಟಿಪಳ್ಳ ಕಟ್ಟೆ ಪೂಜೆಗಳು ನಡೆಯಿತು.
ಜ.10 ರಂದು ಅಜ್ಜಾವರ ಶ್ರೀ ಶಂಕರ ಭಾರತೀ ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಿತು ಜ.11 ರಂದು ಮಿತ್ತೂರು ದೈವಗಳ ಭಂಡಾರ , ಕಾನತ್ತಿಲ ದೈವಗಳ ಭಂಡಾರ ಬಂದು, ವಾಲಸರಿ ಉತ್ಸವ, ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಾವಿರಾರು ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದರು. ಇಂದು ರಾತ್ರಿ ಕಲ್ಕುಡ ದೈವಗಳ ಭಂಡಾರ ಬಂದು ನಂತರ ಚೆನ್ನಕೇಶವ ದೇವರ ರಥೋತ್ಸವ ವಿಜ್ರಂಭಣೆಯಿಂದ ನಡೆಯಲಿದೆ.
- Saturday
- November 23rd, 2024