ವರ್ಷದ ಹಿಂದೆ ಹೇಳಿದ ಮಾತನ್ನು ಉಳಿಸಿಕೊಂಡು ವಿಶ್ವಾಸದಿಂದ ಗುದ್ದಲಿಪೂಜೆ ಮಾಡಿದ್ದೇವೆ. ಅದರಂತೆ ವರ್ಷದೊಳಗೆ ಕಾಮಗಾರಿ ಮುಗಿಸಿ ನಾವೇ ಉದ್ಘಾಟನೆ ಮಾಡುತ್ತೇವೆ ಎಂದು ಇಂಧನ ಸಚಿವ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಇಂದು ಸುಳ್ಯದಲ್ಲಿ ನಡೆದ 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಹಾಗೂ ವಿದ್ಯುತ್ ಲೈನ್ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಅರಣ್ಯ ಇಲಾಖೆಯ ಅಡೆತಡೆ ನಿವಾರಿಸಿ 9 ಕೋಟಿ ಪರಿಹಾರ ನೀಡಿದ್ದೇವೆ. ಇಲಾಖೆಯ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮುಂದುವರೆಯುತ್ತಿದೆ. ಜಿಲ್ಲೆಯಲ್ಲಿ 11 ಕಡೆ 110 ಕೆ.ವಿ.ಸ್ಟೇಷನ್ ಗಳಿಗೆ ಮಂಜೂರಾತಿ ನೀಡಿದ್ದೇವೆ. ಸುಳ್ಯದ ರಾಜಾರಾಂಪುರ, ಚಾರ್ವಾಕ,ಜಾಲ್ಸೂರು ಹಾಗೂ ನಿಂತಿಕಲ್ಲಿನಲ್ಲಿ 33 ಕೆ.ವಿ.ಸಬ್ ಸ್ಟೇಷನ್ ಮಾಡಿತ್ತೇವೆ ಎಂದರು.
ಬೆಳಕು ಯೋಜನೆಯ ವತಿಯಿಂದ ಸರಕಾರಿ ಜಾಗದಲ್ಲಿ ನೆಲೆಸಿದ, ಪಂಚಾಯತ್ ಎನ್.ಓ.ಸಿ. ನೀಡದೇ ಬಾಕಿ ಉಳಿದಿರುವ ಮನೆಗಳಿಗೆ ವಿದ್ಯುತ್ ನೀಡಿದ್ದೇವೆ. ಈ ಯೋಜನೆಯಿಂದ ದ.ಕ.ಜಿಲ್ಲೆಯಲ್ಲಿ 6600 ಜನರಿಗೆ , ತಾಲೂಕಿನಲ್ಲಿ 535 ಜನರಿಗೆ ವಿದ್ಯುತ್ ಸಂಪರ್ಕ ನೀಡಿದ್ದೇವೆ. ರಾಜ್ಯಾದ್ಯಂತ ನಮ್ಮ ಅವಧಿಯಲ್ಲಿ 200 ಕಡೆ ಸಬ್ ಸ್ಟೇಷನ್ ಗಳಿಗೆ ಮಂಜೂರಾತಿ ನೀಡಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಎಸ್. ಅಂಗಾರ 2007 ರಲ್ಲಿ ಮಂಜೂರಾದ 110 ಕೆ.ವಿ.ಸಬ್ ಸ್ಟೇಷನ್ ಗ ಮಂಜೂರಾತಿ ಸಿಕ್ಕಿದರೂ ಆರಣ್ಯ ಇಲಾಖೆಯ ತಡೆಯಿಂದ ವಿಳಂಬವಾಯಿತು. ಪ್ರಾರಂಭದಲ್ಲಿ 20 ಕೋಟಿ ಇದ್ದ ಬಜೆಟ್ ಈಗ 46 ಕೋಟಿಗೇರಿದೆ. ಜನರ ಒತ್ತಡದ ಮಧ್ಯೆಯೂ ಹಲವಾರು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ್ದರಿಂದ ಇಂದು ಬೇಡಿಕೆ ಈಡೇರಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಎ.ವಿ.ತೀರ್ಥರಾಮ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್ ಸಿಂಹ ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ ಕಂದಡ್ಕ,ನ.ಪಂ.ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ನ.ಪಂ.ಸದಸ್ಯೆ ಶೀಲಾವತಿ ಕುರುಂಜಿ, ಮೆಸ್ಕಾಂ ನಿರ್ದೇಶಕ ಮಂಜಪ್ಪ, ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್
ಮಂಜುನಾಥ ಶ್ಯಾನುಭೋಗ್, ತಹಶೀಲ್ದಾರ್ ಕು.ಅನಿತಾಲಕ್ಷ್ಮೀ, ಕೆಪಿಟಿಸಿಎಲ್ ನ ಅಧಿಕಾರಿಗಳಾದ ಪುಷ್ಪಾ, ಕೃಷ್ಣರಾಜ್, ಉಮೇಶ್ ಉಪಸ್ಥಿತರಿದ್ದರು. ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ರವಿಕಾಂತ್ ಕಾಮತ್ ಸ್ವಾಗತಿಸಿ, ಕೆಪಿಟಿಸಿಎಲ್ ನ ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾಧರ ಕೆ. ವಂದಿಸಿದರು. ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.