ದಿ. ೩೦ ರಂದು ಸ.ಉ.ಹಿ.ಪ್ರಾ. ಶಾಲೆ ಅಮರಪಡ್ನೂರು ಇಲ್ಲಿನ ವಾರ್ಷಿಕೋತ್ಸವವು ಊರಿನ ಸ್ಥಳೀಯ ಸಂಘಸಂಸ್ಥೆಗಳ, ದಾನಿಗಳ ಸರಕಾರದಿಂದ ನಡೆಯಿತು. ಶ್ರೀಮತಿ ಕೊಳಂಚಿ ಸಾಹಿತಿ ಧ್ವಜಾರೋಹಣವನ್ನು ಮಾಡಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಶ್ರೀಮತಿ ಭುವನೇಶ್ವರಿ, ಶ್ರೀಜನಾರ್ಧನ ಪೈಲೂರು, ಶ್ರೀ ರಾಧಾಕೃಷ್ಣ ಕೊರತ್ತಡ್ಕ, ಹಾಗೂ ಶಿಕ್ಷಣಧಿಕಾರಿ ಎಸ್.ಪಿ.ಮಹಾದೇವ್, ಶಾಲಾ ಶತಮಾನೋತ್ಸವ ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ನಿವೃತ್ತ ಮುಖ್ಯಶಿಕ್ಷಕಿ ಶ್ರೀಮತಿ ರಮಾಕಿಶೋರಿ, ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಶ್ರೀಧರ್ .ಕೆ. ಎಸ್ ಡಿಎಂಸಿ ಉಪಾಧ್ಯಕ್ಷೆ ಗೀತಾ ಕೊರತ್ಯಡ್ಕ , ವಿವಿಧ ಸಂಘದ ಪದಾಧಿಕಾರಿಗಳು, ಪೋಷಕರು, ಎಸ್ ಡಿ ಎಂ ಸಿ ಸದಸ್ಯರು, ಶಾಲಾ ಶಿಕ್ಷಕರು , ಹಾಗೂ ಮಕ್ಕಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯ ನೆರವೇರಿಸಿದರು. ಸಮಾರಂಭದ ಅತಿಥಿಗಳಾಗಿ ಶ್ರೀಕೇಶವ ಗೌಡ ಕರ್ಮಜೆ,ಶ್ರೀ ಎಸ್.ಎನ್. ಮನ್ಮಥ, ಶ್ರೀ ರಾಧಾಕೃಷ್ಣ ಬೊಳ್ಳೂರು, ಶ್ರೀ ಲಕ್ಮೀಶ ಚೊಕ್ಕಾಡಿ, ಸಂತೋಷ್, ಎಸ್ ಡಿ ಎಂಸಿ ಅಧ್ಯಕ್ಷ ಈಶ್ವರ ಕಾಯರ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತಿನ್ ಪಡ್ಪು, ಗಿತೇಂದ್ರ ಕೊಪ್ಪತ್ತಡ್ಕ, ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷೆ ವೀಣಾ ಪಡ್ಪು, ಪೂರ್ಣಿಮಾ ಮನೋಹರ್, ಮನೋಜ್ ಪಡ್ಪು, ಮುಖ್ಯ ಶಿಕ್ಷಕಿ ರೂಪರಾಣಿ ಉಪಸ್ಥಿತರಿದ್ದರು. ನಂತರ ಶಾಲಾಮಕ್ಕಳಿಂದ, ಅಂಗನವಾಡಿ ಮಕ್ಕಳಿಂದ, ಯುವತಿ ಮಂಡಲಸದಸ್ಯರಿಂದ, ಪೋಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನದೆಯಿತು. ಬಳಿಕ ಶಾರದ ಆಟ್ಸ್ ಮಂಜೇಶ್ವರ ತಂಡದವರಿಂದ ನಾಟಕ ಪ್ರದರ್ಶನ ನಡೆಯಿತು. ಸಾರ್ಥೈಕಶತಮಾನ ಸಮಿತಿ ಕಾರ್ಯದರ್ಶಿ ಮುರಳೀಧರ್ ಚೆಕ್ಕಿನಡ್ಕ ಹಾಗೂ ಶಿಕ್ಷಕರಾದ ಶಿವಕುಮಾರ್, ರಮ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
- Thursday
- November 21st, 2024