ಸುಳ್ಯ ಚೆನ್ನಕೇಶವ ಜಾತ್ರೋತ್ಸವದಲ್ಲಿ ಸಂತೆ ವ್ಯಾಪಾರಕ್ಕೆ ಧರ್ಮದ ನಿರ್ಭಂದ ಅತ್ಯಂತ ಅಪಾಯಕಾರಿ ಬೆಳವಣಿಗೆ, ಈ ಹಿಂದಿನಿಂದಲೂ ಜಾತ್ರೆಯಲ್ಲಿ ಎಲ್ಲಾ ಧರ್ಮದವರು ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಆಗ ಯಾವತ್ತು ಗೊಂದಲ ಇರಲಿಲ್ಲ, ಆದರೆ ಈ ದೇವಸ್ಥಾನ ಆಡಳಿತ ಸಮಿತಿಯವರು ಹಿಂದೂ ಸಂಘಟನೆ ಒತ್ತಡಕ್ಕೆ ಮಣಿದು ಮತ್ತೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ , ಇದು “ಜಾತ್ರೋತ್ಸವ “ಆಗಬೇಕಿತ್ತು, ಧರ್ಮೋತ್ಸವ ಅಲ್ಲ ಹಾಗೊಂದು ವೇಳೆ ದೇವಸ್ಥಾನ ಆಡಳಿತ ಸಮಿತಿಯವರಿಗೆ ಹಿಂದೂಗಳ ಮೇಲೆ ಪ್ರೀತಿ ಅನುಕಂಪವಿದ್ದರೆ ವ್ಯಾಪರ ನಡೆಸಲು ಬರುವ ಬಡ ಹಿಂದುಗಳಿಗೆ ಉಚಿತವಾಗಿ ವ್ಯಾಪಾರಕ್ಕೆ ಸ್ಥಳಾವಕಾಶ ನೀಡಲಿ ಎಂದು ಕೆ ಪಿ ಸಿ ಸಿ ವಕ್ತಾರ ಭರತ್ ಮುಂಡೋಡಿ ಒತ್ತಾಯಿಸಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ,
ಹಿಂದೂ ಧರ್ಮದಲ್ಲಿ “ವಸುದೈವ ಕುಟುಂಬಕಂ” ಎಂಬುದಕ್ಕೆ ಮಹತ್ವವಿದೆ, ಹಿಂದಿನ ಕಾಲದಿಂದಲೂ ನಡೆದು ಬಂದ ಸಂಪ್ರದಾಯದಂತೆ, ಹಿಂದೂ ಧರ್ಮದ ಹೃದಯ ವೈಶಾಲ್ಯತೆ ಮೆರೆಯಬೇಕಾಗಿತ್ತು. ಅದು ಬಿಟ್ಟು ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಇಂತಹ ನಿರ್ಧಾರ ಕೈಗೊಳ್ಳಬಾರದಿತ್ತು ಎಂದರು.ಈ ನಿರ್ಧಾರದ ಬಗ್ಗೆ ಕ್ಷೇತ್ರದ ಶಾಸಕರು ಸಚಿವರು ತಮ್ಮ ನಿಲುವು ಪ್ರಕಟಿಸಬೇಕು. ಹಾಗೊಂದು ವೇಳೆ ಅವರ ನಿಲುವ ಹಾಗೇ ಎಂದಾದರೆ, ಅನ್ಯ ಧರ್ಮಿಯರ ಮತ ಯಾಚಿಸುವುದಿಲ್ಲವೆಂದೂ, ಅನ್ಯ ಧರ್ಮಿಯರೊಂದಿಗೆ ವ್ಯಾಪಾರ ವ್ಯವಹಾರ ನಡೆಸುವುದಿಲ್ಲ ಎಂದು ಬಹಿರಂಗ ಪಡಿಸಲಿ , ಪಕ್ಷದಲ್ಲಿರುವ ಅಲ್ಪಸಂಖ್ಯಾತ ಘಟಕ,ಕೇಂದ್ರ, ರಾಜ್ಯ ಮಂಡಲ ಸಮಿತಿಗಳನ್ನು ವಿಸರ್ಜಿಸಲಿ ಎಂದು ಸವಾಲೆಸೆದರು.
ದೇವಸ್ಥಾನದವರಿಗೆ ಸಾರ್ವಜನಿಕ ಸ್ಥಳದಲ್ಲಿ ವಸೂಲಿಗೆ ಅವಕಾಶವಿಲ್ಲ , ರಸ್ತೆ ಬದಿ ಸಾರ್ವಜನಿಕ ಸ್ಥಳ, ಸಾರ್ವಜನಿಕರ ತೆರಿಗೆಯಲ್ಲಿ ಆಗಿದೆ, ಹಿಂದುಗಳ ತೆರಿಗೆ ಸಂಗ್ರಹ ಮಾತ್ರವಾ ಎಂದು ಪ್ರಶ್ನೆ ಮಾಡಿದರು. ಕಾನೂನು ಭದ್ರತೆ ಕೊಡಬೇಕಾದ ಪೋಲಿಸ್ ಇಲಾಖೆ ನುಣುಚಿಕೊಂಡಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಕಾಂಗ್ರೆಸ್ ವಕ್ತಾರ ನಂದರಾಜ ಸಂಕೇಶ ಉಪಸ್ಥಿತರಿದ್ದರು.
- Thursday
- November 21st, 2024