Ad Widget

ಸುಬ್ರಹ್ಮಣ್ಯ : ಲವ್ ಜಿಹಾದ್ ಗೆ ಯತ್ನ ಆರೋಪ – ಮುಸ್ಲಿಂ ಯುವಕನಿಗೆ ಹಲ್ಲೆ – ದೂರು ; ಯುವತಿ ಮನೆಯಿಂದ ಪ್ರತಿ ದೂರು – ಫೋಕ್ಸೋ ಪ್ರಕರಣ ದಾಖಲು

ಜಾಲತಾಣವಾದ ಪರಿಚಯವಾದ ಹಿಂದೂ ಯುವತಿಯನ್ನು ಭೇಟಿಯಾಗಲು ಸುಬ್ರಹ್ಮಣ್ಯಕ್ಕೆ ಬಂದ ಮುಸ್ಲಿಂ ಯುವಕನಿಗೆ ಹಲ್ಲೆಗೈದ ಪ್ರಕರಣ ಬಗ್ಗೆ ಇತ್ತಂಡಗಳಿಂದ ದೂರು ದಾಖಲಾದ ಘಟನೆ ವರದಿಯಾಗಿದೆ. ಯುವಕ ಹಾಗೂ ಯುವತಿಯ ಪೋಷಕರು ಪ್ರತ್ಯೇಕ ದೂರು ನೀಡಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ವಿರುದ್ಧ ಯುವತಿಯ ಪೋಷಕರು ನೀಡಿದ ದೂರಿನನ್ವಯ ಪೋಕ್ಸೋ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ ಅಫೀದ್ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದು, ನನ್ನ ಮೇಲೆ 10 ರಿಂದ 12 ಜನ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣವಾದ ಇನ್ಸಾಗ್ರಾಮ್ ನಲ್ಲಿ ಸುಬ್ರಹ್ಮಣ್ಯದ ವಿದ್ಯಾರ್ಥಿನಿಯ ಪರಿಚಯವಾಗಿ, ಆಕೆಯನ್ನು ನೋಡಲು ಈ ಹಿಂದೆ 2-3 ಸಲ ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣಕ್ಕೆ ಹೋಗಿ ಅವಳನ್ನು ಮಾತನಾಡಿಸಿಕೊಂಡು ಬಂದಿದ್ದು, ಅದರಂತೆ ಜ.5 ರಂದು ಸಂಜೆ ಸುಬ್ರಹ್ಮಣ್ಯದ ಬಸ್ ನಿಲ್ದಾಣಕ್ಕೆ ಬಂದು ವಿದ್ಯಾರ್ಥಿನಿ ಕಾಲೇಜಿನಿಂದ ಬಸ್ಸು ನಿಲ್ದಾಣಕ್ಕೆ ಬಂದು ಮಾತನಾಡುತ್ತಿದ್ದಾಗ ಯಾರೋ
ಪರಿಚಯವಿಲ್ಲದ 2-3 ಜನರು ಬಂದು ಯುವಕನ್ನು
ಬಲಾತ್ಕಾರವಾಗಿ ಎಳೆದುಕೊಂಡು ಅಲ್ಲೇ ರಸ್ತೆಬದಿಯಲ್ಲಿ ಬಂದು ನಿಂತಿದ್ದ ಜೀಪೊಂದರಲ್ಲಿ ಹಾಕಿ ಒಯ್ದು ಸುಬ್ರಹ್ಮಣ್ಯ ಗ್ರಾಮದ ಕುಮಾರಧಾರ ಜಂಕ್ಷನ್ ಹತ್ತಿರವಿರುವ ಹಳೆ ಕಟ್ಟಡದ ಕೊಣೆಯೊಳಗೆ ಕೂಡಿ ಹಾಕಿ ಸುಮಾರು 10-12 ಜನರು ಕೈಯಲ್ಲಿ ಮರದ ದೊಣ್ಣೆ ಮತ್ತು ಬೆತ್ತಗಳಿಂದ ತಲೆ, ಎರಡೂ ಕೈಕಾಲುಗಳಿಗೆ, ಭುಜಗಳಿಗೆ, ಬೆನ್ನು ಹಾಗೂ ದೇಹದ ಇತರ ಭಾಗಗಳಿಗೆ ಹೊಡೆದಿದ್ದಾರೆ. ಕೊಲ್ಲುವ ಉದ್ದೇಶದಿಂದ ಒಬ್ಬನು ಚಾಕುವಿನಿಂದ ತಿವಿಯಲು ಪ್ರಯತ್ನಿಸಿದಾಗ ಉಳಿದವರು ಅವನ್ನನ್ನು ತಡೆದು “ಇನ್ನು ಮುಂದೆ, ನಮ್ಮ ಹುಡುಗಿಯರ ತಂಟೆಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ’ ಎಂದು ಬೈದು ಬೆದರಿಕೆಯೊಡ್ಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಈ ಬಗ್ಗೆ ಯುವತಿಯ ಪೋಷಕರಿಂದ ಮತ್ತೊಂದು ದೂರು ನೀಡಿದ್ದು ಕಾಲೇಜ್ ಬಿಟ್ಟು ಮನೆಗೆ ಹಿಂತಿರುಗಲು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಹಪೀದ್ ಎಂಬಾತನು ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಡ ಹಾಕಿ ಮಗಳ ದೂರವಾಣಿ ಸಂಖ್ಯೆಯನ್ನು ಕೇಳಿದಾಗ ಅದಕ್ಕೆ ಅವಳು ನಿರಾಕರಿಸಿದ್ದು ಆಗ ಅವಳ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿದ್ಯಾರ್ಥಿನಿ ವಿಚಲಿತಳಾದವಳನ್ನು ಕಂಡು
ಆಗ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದು ವಿಚಾರಿಸಿದಾಗ ಭಯಗೊಂಡು ತಡವಾಗಿ ಈ ಬಗ್ಗೆ ತಿಳಿಸಿರುತ್ತಾಳೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಡ ಹಾಕಿ, ಕೈ ಹಿಡಿದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿರುವ ಹಫೀದ್ ನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading