ಡಿ.31ರಂದು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಸಂಭ್ರಮದಿಂದ ನಡೆಯಿತು ಕಾರ್ಯಕ್ರಮದಲ್ಲಿ ಪಿ ಬಿ ದಿವಾಕರ ರೈ ಅಧ್ಯಕ್ಷರು ಪೊಪ್ಯಲರ್ ಎಜ್ಯುಕೇಶನ್ ಸೊಸೈಟಿ ಇವರು ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದ ಉದ್ಘಾಟಿನೆಯನ್ನು ಕೆ ವಿ ಜಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಡಿ ವಿ ಲೀಲಾಧರ ದೀಪ ಪ್ರಜ್ವಾಲನ ಮಾಡುವ ಮೂಲಕ ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಡಾ.ಸಿ ಕೆ ಮಂಜುನಾಥ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಧಿಕಾರಿ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಬಂಟಕಲ್ ಉಡುಪಿ ಇವರು ಡಾ.ಎ ಪಿ ಜೆ ಅಬ್ದುಲ್ ಕಲಾಂರ ಜೀವನಾದರ್ಶವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಮೈಗೂಡಿಸಿಕೊಳ್ಳಬೆಕೆಂದು ಸಾಮಾಜಿಕ ತಳಹದಿ ಭದ್ರವಾಗಲು ಶಿಕ್ಷಣ ಮುಖ್ಯವೆಂದು ವಿವರಿಸಿದರು ಮುಖ್ಯ ಅತಿಥಿಯಾಗಿ ಅರಂತೋಡು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ಭಾಗವಹಿಸಿದ್ದರು ರಾಜ್ಯ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿರುವ ಕು.ಸಾತ್ವಿ, ಕು. ಸಿಂಚನ, ಉಮರುಲ್ ಅದ್ನಾನ್ ಮತ್ತು ಕು.ದೀಪ್ತಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ವೇದಿಕೆಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಉತ್ತಮ ಶಿಕ್ಷಕ ಹಾಗೂ ಕಾಲೇಜಿನ ಸಂಚಾಲಕರಾದ ಕೆ.ಆರ್.ಗಂಗಾಧರ ಸರ್ ಕಾರ್ಯದರ್ಶಿ ಕೆ.ಆರ್ ಪದ್ಮನಾಭ ಸರ್, ಉಪಾಧ್ಯಕ್ಷರಾದ ಜತ್ತಪ್ಪ ಸರ್ ಕಾಲೇಜಿನ ಪ್ರಾಂಶುಪಾಲರು, ಮುಖ್ಯಗುರುಗಳು ಹಾಗೂ ವಿದ್ಯಾರ್ಥಿ ನಾಯಕ ಪುನೀತ್ ಕೆ.ಎಸ್ ದ್ವಿತೀಯ ಕಲಾ ವಿಭಾಗ ಉಪಸ್ಥಿತರಿದ್ದರು ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಎಸ್ ವಾರ್ಷಿಕ ವರದಿ ವಾಚಿಸಿದರು ಮುಖ್ಯ ಗುರುಗಳಾದ ಎಂ.ಕೆ.ಸೀತಾರಾಮ ವಂದನಾರ್ಪಣೆ ಗೈದರು ಅಪರಾಹ್ನ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಮೂಡಿಬಂತು ಅಂಗ್ಲಭಾಷ ಉಪನ್ಯಾಸಕಿ ಅಶ್ವಿನಿ ಕೆ.ಎಮ್ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಜಿ ಆರ್ ಕಾರ್ಯಕ್ರಮ ನಿರೂಪಿಸಿದರು
- Thursday
- November 21st, 2024