Ad Widget

ವಸತಿ ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಗೆ ಅಮರ ಚಾರಿಟೇಬಲ್ ಟ್ರಸ್ಟ್ ನಿಂದ ಅರ್ಜಿ ಸಲ್ಲಿಸಲು ವ್ಯವಸ್ಥೆ

. . . . . . .

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ “ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ/ಅಟಲ್ ಬಿಹಾರಿ ವಾಜಪೇಯಿ/ಡಾ.ಬಿ.ಆರ್ ಅಂಬೇಡ್ಕರ್/ಇಂದಿರಾಗಾಂಧಿ ವಸತಿ ಶಾಲೆ/ಶ್ರೀ ನಾರಾಯಣ ಗುರು ವಸತಿ ಶಾಲೆಗಳಿಗೆ 2023ನೇ ಸಾಲಿನ 6ನೇ ತರಗತಿ ಪ್ರವೇಶ ಪರೀಕ್ಷೆಗೆ ದಿನಾಂಕ 05-01-2023 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, 12-03-2023 ರಂದು ಪರೀಕ್ಷೆ ನಡೆಯಲಿದೆ. ಈ ಸಲುವಾಗಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ವತಿಯಿಂದ ಸುಳ್ಯ, ಕಡಬ ತಾಲೂಕುಗಳ ವಸತಿ ಶಾಲಾ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಸಹಕಾರ ಯೋಜನೆ ರೂಪಿಸಲಾಗಿದ್ದು, ಅರ್ಜಿ ಸಲ್ಲಿಸಲು ಸಂಬಂಧಪಟ್ಟ ದಾಖಲೆಗಳನ್ನು 15-01-2023 ರ ಒಳಗೆ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ತಲುಪಿಸಿದ್ದಲ್ಲಿ ಅರ್ಜಿ ಸಲ್ಲಿಸಿ ಕೊಡಲಾಗುವುದು. (ಈ ಬಗ್ಗೆ ಯಾವುದೇ ಶುಲ್ಕ ಪಾವತಿ ಇರುವುದಿಲ್ಲ). ಈ ಪರೀಕ್ಷೆಯ ತರಬೇತಿಯನ್ನು ಶ್ರೀ ದುರ್ಗಾ ಕಂಪ್ಯೂಟರ್ ವತಿಯಿಂದ ಗ್ರಂಥಾಲಯ ಕೇಂದ್ರ ಗುತ್ತಿಗಾರು ಇಲ್ಲಿ ನೀಡಲಾಗುತ್ತದೆ. (ತರಬೇತಿಗೆ ಶಿಕ್ಷಣ ಪರಿಕರಗಳ ಬಾಬ್ತು 500/- ಪಾವತಿಸಬೇಕಾಗುತ್ತದೆ.) ಎಂದು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಮಾಹಿತಿ ನೀಡಿದ್ದು, ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಆಧಾರ್ ಕಾರ್ಡ್, SATS ನಂಬರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿಯ ಇತ್ತೀಚಿನ ಫೋಟೋ ನೀಡಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9480199711, 8073117026 ಸಂಪರ್ಕಿಸಬಹುದಾಗಿದೆ.
(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!