ಮರ್ಕಂಜ ಗ್ರಾಮದ ಪುರ ಭವಾನಿಶಂಕರ ಗೌಡ ಎಂಬವರ ತೋಟಕ್ಕೆ ಜೂನ್ .17 ರಂದು ರಾತ್ರಿ ಕಾಡಾನೆ ದಾಳಿ ನಡೆಸಿ ಅಪಾರ ಹಾನಿ ಮಾಡಿದ ಘಟನೆ ವರದಿಯಾಗಿದೆ . ಸುಮಾರು 2 ಎಕರೆಗಿಂತಲೂ ಹೆಚ್ಚು ಕೃಷಿಗೆ ಹಾನಿಮಾಡಿದ್ದು 100 ಕ್ಕಿಂತಲೂ ಹೆಚ್ಚು ಬಾಳೆ , ತೆಂಗು , ಕಂಗುಗಳನ್ನು ನಾಶವಾಗಿವೆ . ಈಗಾಗಲೇ ಪೂರ್ತಿ ಅಡಿಕೆ ತೋಟ ಹಳದಿ ರೋಗಕ್ಕೆ ತುತ್ತಾಗಿ ಇದಕ್ಕೂ ಸರಕಾರದಿಂದ ಯಾವುದೇ ಪರಿಹಾರ ಲಭಿಸದೆ ತತ್ತರಿಸಿ ಹೋಗಿದ್ದ ಇವರು ಬಾಳೆ ಕೃಷಿಯನ್ನೇ ಅವಲಂಬಿಸಿದ್ದರು. ಪ್ರತಿವರ್ಷವೂ ಆಗಾಗ ಕಾಡುಪ್ರಾಣಿಗಳ ಉಪಟಳ ಹೆಚ್ಚಿದ್ದು ಕೃಷಿಕರನ್ನು ಕಂಗೆಡುವಂತೆ ಮಾಡಿದೆ. ಸರಕಾರದಿಂದ ಪರಿಹಾರ ಕೊಟ್ಟರೂ ಕೃಷಿಕೆ ಖರ್ಚು ಮಾಡಿದ ಕಾಲಾಂಶವು ಸಿಗುವುದಿಲ್ಲ ಎನ್ನುತ್ತಾರೆ ರೈತರು. ಅರಣ್ಯ ಇಲಾಖೆ ಆದಷ್ಟೂ ಇಂತಹ ಕಡೆಗಳಲ್ಲಿ ಆನೆ ಕಂದಕಗಳನ್ನು ಸಮರ್ಪಕವಾಗಿ ಕೈಗೊಂಡು ಕೃಷಿಕರನ್ನು ರಕ್ಷಿಸಬೇಕಾಗಿದೆ.
- Sunday
- November 24th, 2024