Ad Widget

ಗುತ್ತಿಗಾರು : ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ – ಸಚಿವ ಎಸ್ ಅಂಗಾರರಿಂದ ಪ್ರಯೋಗಾಲಯ ಕೊಠಡಿ,ಇಂಟರ್ ಲಾಕ್ ಹಾಗೂ ಶಾಲಾ ರಸ್ತೆಯ ಕಾಂಕ್ರೀಟ್ ಉದ್ಘಾಟನೆ

. . . . .

ಗುತ್ತಿಗಾರು ಸರಕಾರಿ ಪ್ರೌಢಶಾಲಾ ಸುವರ್ಣ ಮಹೋತ್ಸವ ಕಾರ್ಯಕ್ರಮ ಡಿ.31 ರಂದು ನಡೆಯಿತು. ಸುವರ್ಣ ಮಹೋತ್ಸವ ಪ್ರಯುಕ್ತ ನೂತನವಾಗಿ ನಿರ್ಮಾಣ ಗೊಂಡ ಪ್ರಯೋಗಾಲಯ ಕೊಠಡಿ, ಶಾಲಾ ರಸ್ತೆಯ ಕಾಂಕ್ರೀಟ್ , ಶಾಲಾ ಎದುರಿನ ಇಂಟರ್ ಲಾಕ್‌ ನ್ನು ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಉದ್ಘಾಟಿಸಿ ಮಾತನಾಡಿದರು. ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ರೇವತಿ ನೂತನ ಶೌಚಾಲಯವನ್ನು ಉದ್ಘಾಟಿಸಿದರು. ಕರ್ನಾಟಕ ಸರ್ಕಾರದ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ ತೀರ್ಥರಾಮ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ
ನಿತ್ಯಾನಂದ ಮುಂಡೋಡಿ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಭಾರತೀಯ ರಬ್ಬರ್‌ ಬೋರ್ಡ್ ಸದಸ್ಯ ಮುಳಿಯ ಕೇಶವ ಭಟ್, ಗುತ್ತಿಗಾರು ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ, ಮಂಜುಳಾ ಮುತ್ಲಾಜೆ,
ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಫ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವೀಣಾ ಎಂ.ಟಿ. ವೇದಿಕೆಯಲ್ಲಿದ್ದರು. ಅಬಕಾರಿ ಇಲಾಖೆ ಹೊಸಕೋಟೆ ಇದರ ಸಹಾಯಕ ಆಯುಕ್ತ ಡಾ ಬಾಲಕೃಷ್ಣ ಸಿ. ಎಚ್, ಕರ್ನಾಟಕ ರಾಜ್ಯ ಹೈಕೋರ್ಟ್ ನ್ಯಾಯವಾದಿ ಎಂ. ಆರ್. ಬಾಲಕೃಷ್ಣ, ಸುವರ್ಣ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ದಯಾನಂದ ಎಂ‌.,
ಶಾಲಾಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಲೊಕೇಶ್ವರ ಡಿ.ಆರ್., ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಧ್ಯಕ್ಷ ಮಂಜುನಾಥ ಯು. , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಕೆ., ಪ್ರಾಂಶುಪಾಲೆ ಚೆನ್ನಮ್ಮ, ಮುಖ್ಯೋಪಾಧ್ಯಾಯಿನಿ ನೆಲ್ಸನ್ ಕ್ಯಾಸ್ಟೋಲಿನಾ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಹಲವರನ್ನು ಸನ್ಮಾನಿಸಲಾಯಿತು. ಸ್ಮರಣ ಸಂಚಿಕೆಯನ್ನು ಸಚಿವ ಎಸ್. ಅಂಗಾರ ನೆರವೇರಿಸಿದರು. ವೆಂಕಟ್ ದಂಬೆಕೋಡಿ ಪ್ರಸ್ತಾವಿಕವಾಗಿ ಸ್ವಾಗತಿಸಿದರು, ನೆಲ್ಸನ್ ಕ್ಯಾಸ್ಟೋಲಿನಾ ವರದಿ ವಾಚನ ಮಾಡಿದರು. ಪ್ರಾಂಶುಪಾಲರಾದ ಚೆನ್ನಮ್ಮ ಧನ್ಯವಾದ ಮಾಡಿದರು.
ಕಿಶೋರ್ ಕುಮಾರ್ ಪೈಕ ಹಾಗೂ ಶಿಕ್ಷಕ ಶಶಿಧರ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ,ಊರ ವಿದ್ಯಾಭಿಮಾನಿಗಳಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ಅಮರ ಸಮರ ನಾಯಕ “ಕೆದಂಬಾಡಿ ರಾಮಯ್ಯ ಗೌಡ” ಎಂಬ ಐತಿಹಾಸಿಕ ನಾಟಕದ ಪ್ರದರ್ಶನ ನಡೆಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!