Ad Widget

ಸಂಧ್ಯಾರಶ್ಮಿ- ಪುಸ್ತಕಗಳ ಬಿಡುಗಡೆ, ಕುವೆಂಪು ಜಯಂತಿ ಆಚರಣೆ

. . . . .

ಸುಳ್ಯ ತಾಲೂಕು ನಿವೃತ್ತ ನೌಕರರ ಸಂಘ (ರಿ) ಹಾಗೂ ಸ್ವಂತಿಕಾ ಸಾಹಿತ್ಯ ಸಾಂಸ್ಕೃತಿಕ ಬಳಗ ಆಶ್ರಯದಲ್ಲಿ ಸಂಘದ ‘ ಸಂಧ್ಯಾರಶ್ಮಿ” ಯಲ್ಲಿ ಪುಸ್ತಕಗಳನ್ನು ಬಿಡುಗಡೆ ಹಾಗೂ ಕುವೆಂಪು ಜಯಂತಿ ಆಚರಿಸಲಾಯಿತು. ಸ್ವಂತಿಕಾ ಸಾಹಿತ್ಯ-ಸಾಂಸ್ಕೃತಿಕ ಬಳಗದ ಅಧ್ಯಕ್ಷ ನೀರಬಿದಿರೆ ನಾರಾಯಣ ಸುಳ್ಯ (ನೀನಾಸು)ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಡಾ| ಎಸ್ ರಂಗಯ್ಯ, ಗೌರವಾಧ್ಯಕ್ಷ ಶ್ರೀ ಅಚ್ರಪ್ಪಾಡಿ ಬಾಬು ಗೌಡ (ನಿವೃತ್ತ ಪ್ರಾಂಶುಪಾಲ) ಮುಖ್ಯ ಅತಿಥಿಗಳಾಗಿದ್ದರು.
ಶ್ರೀಮತಿ ಎಂ.ವಿ. ಗಿರಿಜಾ (ನಿವೃತ್ತ ಶಿಕ್ಷಕಿ) ಇವರಿಂದ ‘ ಕುವೆಂಪು ‘ ವಿರಚಿತ ಆಶಯಗೀತೆ ಬಳಿಕ, ಸಂಘದ ಕೋಶಾಧಿಕಾರಿ ಶ್ರೀ ಎಂ. ಸುಬ್ರಹ್ಮಣ್ಯ ಹೊಳ್ಳ ಸ್ವಾಗತಿಸಿದರು. ‘ನೀನಾಸು’ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ‘ ಕುವೆಂಪು ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಲ್ಲದೆ ‘ ಕುವೆಂಪು ‘ ಬಗ್ಗೆ ಸ್ವರಚಿತ ‘ಯುಗಪುರುಷನಿಗೆ ನಮನ ‘ ಕವನ ವಾಚಿಸಿ, “ ಸುಮಾರು ೬೯ ಕೃತಿಗಳ ರಚಿಸಿದ ‘ಕುವೆಂಪು‘ ಈ ಜಗದ ಕವಿ, ಯುಗದ ಕವಿ, ವಿಶ್ವಮಾನವತಾವಾದಿ, ಜಾತ್ಯಾತೀತ, ಮಾನವತೆಯ ಹರಿಕಾರ, ಅವರ ಜನ್ಮದಿನಾಚರಣೆ ನಮ್ಮ ಕರ್ತವ್ಯ “ ಎಂದು ಪ್ರತಿಪಾದಿಸಿದರು.
ಮುಖ್ಯ ಅತಿಥಿಯಾಗಿ ಮಂಗಳೂರಿನಿಂದ ಆಗಮಿಸಿದ್ದ ಶ್ರೀ ಹರಿಯಪ್ಪ ಪೇಜಾವರ, ನಿವೃತ್ತ ಅಸೋಸಿಯೇಟ್-ಪ್ರೊಫೆಸರ್ (ಇಂಗ್ಲಿಷ್‌ವಿಭಾಗ), ಶ್ರೀಗೋಕರ್ಣನಾಥೇಶ್ವರ ಕಾಲೇಜು, ಮಂಗಳೂರು ಇವರು ದೀಪ ಬೆಳಗಿಸಿ ‘ಕುವೆಂಪು’ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ‘ನೀನಾಸು’ ಅವರ ೧೩ನೇ ಕೃತಿ, ‘ಸ್ವಂತಿಕಾ’ ಬಳಗದ ೬೦ನೇ ಕೃತಿ ‘ಕಾಲನ ಕಾಲುಗಳು ‘ (ಕವನಗಳು) ಕೃತಿಯನ್ನು ಬಿಡುಗಡೆ ಮಾಡಿ, ಮುನ್ನುಡಿಕಾರನ ಮಾತುಗಳನ್ನಾಡಿದರು. ಆ ನಂತರ ಅಜ್ಜಾವರ ದೇವರಕಳಿಯ ಶ್ರೀಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿಯವರ ೧೮೯ನೇ ಕೃತಿ ‘ಮೊದಲು ಮಾನವನಾಗು ‘ ಮತ್ತು ೧೯೦ನೇ ಕೃತಿ ‘ಸಿದ್ಧದರ್ಶನ’ ಬಿಡುಗಡೆಗೊಳಿಸಿದರು. ಸ್ವಾಮೀಜಿ ತಮ್ಮ ಈಯೆರಡೂ ಕೃತಿಗಳ ಬಗ್ಗೆ ವಿವರಣೆಯನ್ನಿತ್ತರು. ಬಳಿಕ ನಿವೃತ್ತ ಉಪನ್ಯಾಸಕಿ ಸಾಹಿತಿ ಶ್ರೀಮತಿ ಜಯಮ್ಮ ಬಿ.ಚೆಟ್ಟಿಮಾಡ ಅವರ ಉತ್ತರಕ್ಕೆ-ಎತ್ತರಕ್ಕೆ (ಪ್ರವಾಸ ಕಥನ) ಹಾಗೂ ‘ಹಳಬರ ಜೋಳಿಗೆ ‘ (ಭಾಗ-೮) ಬುಡುಗಡೆಗೊಂಡವು.
ವೇದಿಕೆಯಲ್ಲಿ ನಿನಾಸು, ಡಾ| ಎಸ್ ರಂಗಯ್ಯ, ಶ್ರೀ ಎ.ಬಾಬು ಗೌಡ, ಶ್ರೀ ಹರಿಯಪ್ಪ ಪೇಜಾವರ, ಶ್ರೀಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ, ಶ್ರೀಮತಿ ಜಯಮ್ಮ ಬಿ. ಚೆಟ್ಟಿಮಾಡ ಉಪಸ್ಥಿತರಿದ್ದರು. ‘ನೀನಾಸು’ ಅಧ್ಯಕ್ಷ ಭಾಷಂ ಮಾಡಿ ಎಲ್ಲರನ್ನೂ ವಂದಿಸಿದರು. ಅರಂತೋಡು ನೆ.ಸ್ಮಾ.ಪ.ಪೂ.ಕಾಲೇಜು ನಿವೃತ್ತ ಉಪನ್ಯಾಸಕ, ಸಂಘದ ಉಪಾಧ್ಯಕ್ಷ ಶ್ರೀ ಎ. ಅಬ್ದುಲ್ಲಾ ನಿರೂಪಿಸಿದರು. ಸಾಹಿತ್ಯಾಸಕ್ತರು, ಪಿಂಚಣಿದಾರರ ಸಂಘ ಸದಸ್ಯರು ಉಪಸ್ಥಿತರಿದ್ದರು.

ಸಂಧ್ಯಾರಶ್ಮಿಯಲ್ಲಿ ಪಿಂಚಣಿದಾರರ ದಿನಾಚರಣೆ

ಸುಳ್ಯ ತಾಲೂಕು ಪಿಂಚಣಿದಾರರ ಸಂಘ (ರಿ)ದ ಪಿಂಚಣಿದಾರರ ದಿನಾಚರಣೆ-೨೦೨೨ ಸಂಘದ ಸಭಾಭವನ ‘ಸಂಧ್ಯಾರಶ್ಮಿ‘ಯಲ್ಲಿ ದ. ೨೯ ರಂದು ಜರಗಿತು. ಕುವೆಂಪು ಜನ್ಮದಿನಾಚರಣೆ ಹಾಗೂ ಪುಸ್ತಕಗಳ ಬಿಡುಗಡೆ ಸಮಾರಂಭ ಬಳಿಕ ನಡೆದ ಈ ಕರ‍್ಯಕ್ರಮದ ಅಧ್ಯಕ್ತೆಯನ್ನು ಸಂಘದ ಅಧ್ಯಕ್ಷ ಡಾ| ಎಸ್. ರಂಗಯ್ಯ ವಹಿಸಿದ್ದರು. ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಇಂಗ್ಲೀಷ್ ವಿಭಾಗದ ನಿವೃತ್ತ ಅಸೋಸಿಯೇಟ್ ಪ್ರೊಫೆಸರ್ ಶ್ರೀ ಹರಿಯಪ್ಪ ಪೇಜಾವರ ಮುಖ್ಯ ಅತಿಥಿಗಳಾಗಿದ್ದರು.
ಶ್ರೀಮತಿ ಎಂ.ವಿ.ಗಿರಿಜಾ (ನಿವೃತ್ತ ಶಿಕ್ಷಕಿ) ಇವರಿಂದ ಆಶಯಗೀತೆ ಬಳಿಕ ಸಂಘದ ಕಾರ‍್ಯದರ್ಶಿ, ನಿವೃತ್ತ ಪ್ರಾಂಶುಪಾಲ ಪ್ರೊ| ದಾಮೋದರ ಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು.
ಉಪಾಧ್ಯಕ್ಷೆ ಶ್ರೀಮತಿ ವೈ.ಕೆ.ರಮಾ ಸ್ವಾಗತಿಸಿದರು. ಅಗಲಿದ ಸದಸ್ಯರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ನಿವೃತ್ತ ಬಂಧುಗಳ ಪೈಕಿ ೭೫ ವರ್ಷ ಪೂರೈಸಿದ ೮ ಮಂದಿ ಹಿರಿಯರಿಗೆ ಫಲತಾಂಬೂಲ ನೀಡಿ, ಹಾರಹಾಕಿ ಶಾಲು ಹೊದಿಸಿ ಸನ್ಮನಿಸಲಾಯಿತು.
ನಿವೃತ್ತ ಮುಖ್ಯಗುರುಗಳಾದ ಶ್ರೀ ಅಡ್ತಲೆ ಹೊನ್ನಪ್ಪ ಗೌಡ, ನಿವೃತ್ತ ಪ್ರಾಂಶುಪಾಲರುಗಳಾದ ಶ್ರೀ ಜಿ. ಉಮ್ಮರ್, ಸುಳ್ಯ, ಶ್ರೀ.ಸಿ. ಬಾಲಚಂದ್ರ ಕುಕ್ಕುಜಡ್ಕ, ನಿವೃತ್ತ ಪದವೀಧರ ಅಧ್ಯಾಪಕ ಶ್ರೀ ಕೆ ನಾರಾಯಣ ಭಟ್, ಎಣ್ಮೂರು, ನಿವೃತ್ತ ಕಂದಾಯ ಇಲಾಖಾ ಪ್ರ.ದ.ಸ. ಶ್ರೀ ಪಿ.ದೊಡ್ಡಣ್ಣ ಗೌಡ ಏನೆಕಲ್ಲು, ನಿವೃತ್ತ ದ್ವಿ.ದ.ಸ ಶ್ರೀ ಎಂ. ಜನಾರ್ಧನ ಗೌಡ, ಕುಕ್ಕುಜಡ್ಕ, ನಿವೃತ್ತ ವಾಹನ ಚಾಲಕರಾದ ಶ್ರೀ ಕೆ. ನಾಗಪ್ಪ, ನಿವೃತ್ತ ಪಂಚಾಯತ್ ವಿಸ್ತರಣಾಧಿಕಾರಿ ಶ್ರೀ ಎಸ್.ಕೆ. ಜೋಯಪ್ಪ ಸುಳ್ಯ ಇವರುಗಳು ಸನ್ಮಾನ ಸ್ವೀಕರಿಸಿದರು
ಸನ್ಮಾನ ಸ್ವೀಕರಿಸಿದವರ ಪರವಾಗಿ ಶ್ರೀ ಹೊನ್ನಪ್ಪ ಗೌಡ ಅಡ್ತಲೆ, ಶ್ರೀ ಜಿ.ಉಮ್ಮರ್, ಶ್ರೀ ಕೆ.ನಾರಾಯಣ ಭಟ್ ಮಾತನಾಡಿದರು.
ಮುಖ್ಯ ಅತಿಥಿ ಶ್ರೀ ಹರಿಯಪ್ಪ ಪೇಜಾವರ ಮಾತನಾಡಿ “ ಈ ರೀತಿಯ ಕಾರ್ಯಕ್ರಮಗಳು, ಹಿರಿಯರಿಗೆ ಸನ್ಮಾನ, ಪಿಂಚಣಿದಾರರ ಸಮ್ಮಿಲನ, ಜೀವನೋತ್ಸಾಹ ಹೆಚ್ಚಿಸುವ ಕಾರ್ಯಕ್ರಮಗಳು ಒಳ್ಳೆಯ ಅನುಕರಣೀಯ ಬೆಳವಣಿಗೆ ಎಂದು ಶ್ಲಾಘಿಸಿದರು.
ಸಂಘದ ಕೋಶಾಧಿಕಾರಿ ಶ್ರೀ ಎಂ. ಸುಬ್ರಹ್ಮಣ್ಯ ಹೊಳ್ಳ ಹಾಗು ಸಂಘದ ಗೌರವಾಧ್ಯಕ್ಷ ಶ್ರೀ ಎ. ಬಾಬು ಗೌಡ ಸನ್ಮಾನಿತರನ್ನು ಪರಿಚಯಿಸಿದರು. ಸಂಘದ ಉಪಾಧ್ಯಕ್ಷ ಶ್ರೀ. ಎ. ಅಬ್ದುಲ್ಲಾ ವಂದಿಸಿದರು ಹಾಗೂ ಕಾರ್ಯಕ್ರಮ ನಿರ್ವಹಿಸಿದರು, ನಿವೃತ್ತ ನೌಕರರು, ಪಿಂಚಣಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!