ಮಳೆಗಾಲ ಆರಂಭ ಸಂದರ್ಭದಲ್ಲಿ ಕೊಡಗಿನ ವಿವಿಧ ಭಾಗಗಳಲ್ಲಿ ಆನೆಗಳ ಹಾವಳಿ ಸರ್ವೇಸಾಮಾನ್ಯ. ಕೊಡಗಿನ ಹಲವು ಕಾಫಿ ತೋಟಗಳು ಅರಣ್ಯ ಪರಿಸರಕ್ಕೆ ಹೊಂದಿಕೊಂಡಿದ್ದು ಈ ಪ್ರದೇಶಗಳಲ್ಲಿ ಕಾಡಾನೆಗಳು ಕಾಫಿ ತೋಟವನ್ನು ಪ್ರವೇಶಿಸಿ ತೋಟಗಳ ಗಿಡ ಮರಗಳನ್ನು ಕೆಡವಿ ತುಂಬಾ ನಷ್ಟ ಉಂಟು ಮಾಡುತ್ತದೆ. ಸಿದ್ದಾಪುರ ಗ್ರಾಮದ ಪಕ್ಕದಲ್ಲಿ ಮಾಲ್ದಾರೆ ಅರಣ್ಯ ಪ್ರದೇಶವಿದ್ದು ಈ ಪ್ರದೇಶಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದೀಗ ಜೂನ್ 19ರಂದು ಸಂಜೆ 3 ಗಂಟೆ ವೇಳೆಗೆ ಸಿದ್ದಾಪುರದಲ್ಲಿ ಕಾಡಾನೆಗಳ ಹಿಂಡು ಒಂದುಕಾಫಿ ತೋಟದಿಂದ ಮತ್ತೊಂದು ತೋಟಕ್ಕೆ ಪ್ರವೇಶಿಸಲು ರಸ್ತೆಯನ್ನು ದಾಟುತ್ತಿರುವುದು ಸ್ಥಳೀಯರ ಮೊಬೈಲ್ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.
- Friday
- November 22nd, 2024