ಪ್ರಸ್ತುತ ದಿನಗಳಲ್ಲಿ ಹೆಮ್ಮಾರಿಯಾಗಿ ಕಾಡುತ್ತಿರುವ ಕೊರೊನಾ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ಆರಂಭದ ಸಂದರ್ಭದಲ್ಲಿ ಲಾಕ್ ಡೌನ್ ಆರಂಭವಾಗಿದ್ದು, ಇತ್ತಿಚಿಗಷ್ಟೆ ಸಡಿಲಿಕೆಯೂ ಆಯಿತು. ಸಡಿಲಿಕೆ ಆದ ದಿನದಿಂದ ಕೊರೊನಾದ ಹಾವಾಳಿ ಹೆಚ್ಚಾಗುತ್ತಲೇ ಇದೆ. ಹೀಗಿರುವಾಗ ಸರ್ಕಾರ ಶಾಲಾ – ಕಾಲೇಜುಗಳನ್ನು ತೆರೆಯುವುದು ಸೂಕ್ತವಲ್ಲ. ಏಕೆಂದರೆ, ವಿದ್ಯಾರ್ಥಿಗಳಲ್ಲಿ ಯಾರೊಬ್ಬರಿಗಾದರೂ ವೈರಸ್ ತಗುಲಿದರೂ ಸಹ ಇಡೀ ವಿದ್ಯಾಸಂಸ್ಥೆಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಹಿತ ದೃಷ್ಟಿಯಿಂದ ಶಾಲಾ- ಕಾಲೇಜುಗಳನ್ನು ಪುನರಾರಂಭಿಸುವುದನ್ನು ಮುಂದೂಡುವುದು ಉತ್ತಮ. ಸೋಂಕು ಒಂದು ವೇಳೆ ಹೆಚ್ಚಾದರೆ. ಹತೋಟಿಗೆ ತರುವುದು ತುಂಬಾ ಕಷ್ಟ. ಆದರಿಂದ ಆತುರದ ನಿರ್ಧಾರ ಸೂಕ್ತವಲ್ಲ. ಈ ನಿಟ್ಟಿನಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿ ನಿರ್ಮೂಲನೆ ಆಗುವವರೆ ಶಾಲಾ – ಕಾಲೇಜು ಪ್ರಾರಂಭಿಸುವುದು ಯೋಗ್ಯವಲ್ಲ.
ಸಂದೀಪ್ ಪೂಜಾರಿ ಕುಂಜಾಡಿ.
- Friday
- November 22nd, 2024