
ಪೈಂಬೆಚ್ಚಾಲಿನ ದಿನ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಬಡ ವ್ಯಕ್ತಿಯೊಬ್ಬರು, ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ, ಆರ್ಥಿಕ ಅಡಚಣೆ ಯಿಂದ ಹೆಚ್ಚಿನ ಚಿಕಿತ್ಸೆ ಹಾಗು ಉನ್ನತ ವೈದ್ಯಕೀಯ ತಪಾಸಣೆ ನಡೆಸಲು ಸಾಧ್ಯವಾಗದೆ, ಸಂಕಷ್ಟದಲ್ಲಿರುವ ವಿಷಯವು, ಪೈಂಬೆಚ್ಚಾಲಿನ ಎಸ್ಸೆಸ್ಸೆಫ್ ನಾಯಕರ ಗಮನಕ್ಕೆ ಬಂದಾಗ, ಅದಕ್ಕೆ ತುರ್ತಾಗಿ ಸ್ಪಂದಿಸಿದ ಎಸ್ಸೆಸ್ಸೆಫ್ ನಾಯಕರು, ದಾನಿಗಳ ಸಹಕಾರದಿಂದ ಆ ರೋಗಿಯ ಚಿಕಿತ್ಸೆ ಗೆ ಬೇಕಾದ ಧನಸಹಾಯವನ್ನು ಎಸ್ಸೆಸ್ಸೆಫ್ ವತಿಯಿಂದ ನೀಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಅಧ್ಯಕ್ಷರಾದ ಆಸಿಫ್ ಕೆ. ಎಂ. ಉಪಾಧ್ಯಕ್ಷರಾದ ಅಬ್ದುಲ್ ಅಲಿ ಪಿ. ಕಾರ್ಯದರ್ಶಿ ಟಿಎಎಚ್ಚೆಸ್ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾದ ಮುಹಮ್ಮದ್ ಕುಞಿ ಸಿ.ಎಚ್. ಉಪಸ್ಥಿತರಿದ್ದರು.